ವೈರಲ್: ಯುವಕನೋರ್ವ ಬೆಟ್ಟದ ತುದಿಯಲ್ಲಿ ನಿಂತು ಸ್ಟಂಟ್ ಮಾಡುವಾಗ ಬ್ಯಾಲೆನ್ಸ್ ಸಿಗದೆ ಮುಂದಕ್ಕೆ ಹೋಗಿ ಪಾತಾಳಕ್ಕೆ ಬಿದ್ದಿರುವ ಘಟನೆಯೊಂದು ನಡೆದಿದೆ.
ಯುವಕರಿಬ್ಬರು ಬೆಟ್ಟದ ತುದಿಗೆ ಹೋಗಿದ್ದಾರೆ. ಈ ವೇಳೆ ಅಲ್ಲಿ ಸ್ಟಂಟ್ಗಳನ್ನ ಮಾಡುತ್ತಿರುತ್ತಾರೆ. ಆಗ ಇಬ್ಬರ ಪೈಕಿ ಒಬ್ಬ ಯುವಕ ಬೆಟ್ಟದ ತುದಿಯಲ್ಲಿ ನಿಂತು ಬ್ಯಾಕ್ ಫ್ಲಿಪ್ ಹೊಡೆಯುತ್ತಾನೆ. ಆದರೆ ಯುವಕನಿಗೆ ನಿಲ್ಲಲು ಬ್ಯಾಲೆನ್ಸ್ ಸಿಗದ ಕಾರಣ ಹಾಗೆ ಮುಂದೆ ಹೋಗಿ ಪಾತಾಳಕ್ಕೆ ಬಿದ್ದಿದ್ದಾನೆ. ಈ ಘಟನೆ ಎಲ್ಲಿ ನಡೆದಿರೋದು ಎಂದು ತಿಳಿದು ಬಂದಿಲ್ಲ.
😳😳😳 pic.twitter.com/8xEHEKO1P5
— Gente Que Se Extingue Sola 🤦🏻♂️ (@extinguiendonos) April 10, 2024
ಆದ್ರೆ ಯುವಕ ಸ್ಟಂಟ್ ಮಾಡಿ ಬೀಳುತ್ತಿರುವಾಗ ತಕ್ಷಣ ಇನ್ನೊಬ್ಬ ಯುವಕ ಆತನನ್ನ ಹಿಡಿಯಲು ಮುಂದಾಗುತ್ತಾನೆ. ಆದರೆ ಯುವಕ ಕೈಗೆ ಸಿಗದೇ ಪಾತಾಳಕ್ಕೆ ಮುಗ್ಗರಿಸಿ ಬಿದ್ದಿದ್ದಾನೆ. ಈ ಘಟನೆಯ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.