ದೆಹಲಿ: ವಿಶ್ವದ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ 360 ಡಿಗ್ರಿ ದೃಶ್ಯಾವಳಿಯನ್ನು ಚಿತ್ರಿಸುವ ವೀಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದೆ.
ಬಳಕೆದಾರ @historyinmemes ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ಈ ವೀಡಿಯೋ ಬಳಕೆದಾರರಿಗೆ ಪರ್ವತದ ಅಪಾಯಕಾರಿ ಭೂಪ್ರದೇಶದ ಅಭೂತಪೂರ್ವ ನೋಟವನ್ನು ನೀಡಿದೆ.
ವೀಡಿಯೊದಲ್ಲಿ, ನುರಿತ ಪರ್ವತಾರೋಹಿಗಳ ತಂಡವು ಹಿಮದಿಂದ ಆವೃತವಾದ ಮೌಂಟ್ ಎವರೆಸ್ಟ್ ಶಿಖರ ಏರಿ ನಿಂತಿರುವುದನ್ನ ಕಾಣಬಹುದು.
ಮೌಂಟ್ ಎವರೆಸ್ಟ್ನ ಮೇಲ್ಭಾಗದಿಂದ 360 ಡಿಗ್ರಿ ಕ್ಯಾಮೆರಾ ವೀಕ್ಷಣೆ” ಎಂದು ವೀಡಿಯೊದ ಶೀರ್ಷಿಕೆಯನ್ನು ಬರೆಯಲಾಗಿದೆ. ಸದ್ಯ ಈ ವಿಡಿಯೋ ಸಕತ್ ವೈರಲ್ ಆಗ್ತಿದೆ.
This is a 360° camera view from the top of Mt. Everest pic.twitter.com/trboDIIXI5
— Historic Vids (@historyinmemes) February 1, 2024