News Karnataka Kannada
Monday, April 29 2024
ದೇಶ

2021-2023ರ ಅವಧಿಯಲ್ಲಿ ವಿದೇಶಿ ಉಪಗ್ರಹಗಳ ಉಡಾವಣೆ: 4 ದೇಶಗಳೊಂದಿಗೆ ಇಸ್ರೋ ಒಪ್ಪಂದ

Isro World 12082021
Photo Credit :

ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2021-2023ರ ಅವಧಿಯಲ್ಲಿ ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಲು ನಾಲ್ಕು ದೇಶಗಳೊಂದಿಗೆ ಆರು ಒಪ್ಪಂದಗಳಿಗೆ ಸಹಿ ಹಾಕಿದೆ.

ಎನ್‌ಎಸ್‌ಐಎಲ್ 2021-23ರ ಅವಧಿಯಲ್ಲಿ ಪಿಎಸ್‌ಎಲ್‌ವಿ ಮೂಲಕ ವಿದೇಶಿ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲು ನಾಲ್ಕು ದೇಶಗಳೊಂದಿಗೆ ಆರು ಉಡಾವಣಾ ಸೇವಾ ಒಪ್ಪಂದಗಳಿಗೆ ಸಹಿ ಹಾಕಿದೆ. ಇಸ್ರೋ ಈ ವಿದೇಶಿ ಉಪಗ್ರಹಗಳನ್ನು ವಾಣಿಜ್ಯ ಆಧಾರದ ಮೇಲೆ ಉಡಾವಣೆ ಮಾಡುವ ಮೂಲಕ ಸುಮಾರು 132 ಮಿಲಿಯನ್ ಯುರೋಗಳನ್ನು ಗಳಿಸಲಿದೆ.

ಭಾರತ ಸರಕಾರದ ಬಾಹ್ಯಾಕಾಶ ಇಲಾಖೆಯಡಿಯಲ್ಲಿ ಇಸ್ರೋ ತನ್ನ ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಮೂಲಕ ವಾಣಿಜ್ಯ ಆಧಾರದ ಮೇಲೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ)ನಲ್ಲಿ ಇತರ ದೇಶಗಳಿಗೆ ಸೇರಿದ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ.

342 ವಿದೇಶಿ ಉಪಗ್ರಹ ಉಡಾವಣೆ
ಇಸ್ರೋ 1999ರಿಂದ ಇಲ್ಲಿಯವರೆಗೆ 34 ದೇಶಗಳಿಗೆ ಸೇರಿದ ಒಟ್ಟು 342 ವಿದೇಶಿ ಉಪಗ್ರಹಗಳನ್ನು ವಾಣಿಜ್ಯ ಆಧಾರದ ಮೇಲೆ ಭಾರತೀಯ ಪಿಎಸ್‌ಎಲ್‌ವಿ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಭಾರತೀಯ ಉಡಾವಣಾ ವಾಹನದಲ್ಲಿ ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತವು ಕಳೆದ ಮೂರು ವರ್ಷಗಳಲ್ಲಿ 35 ಮಿಲಿಯನ್ ಅಮೆರಿಕನ್ ಡಾಲರ್ ಮತ್ತು 10 ಮಿಲಿಯನ್ ಯುರೋಗಳಷ್ಟು ವಿದೇಶಿ ವಿನಿಮಯ ಆದಾಯವನ್ನು ಗಳಿಸಿದೆ.

ಅಮೆರಿಕದ ಗರಿಷ್ಠ 226 ಉಪಗ್ರಹಗಳು, ಕೆನಡಾ ಮತ್ತು ಯುಕೆಯ ತಲಾ 12, ಜರ್ಮನಿಯ 11 ಉಪಗ್ರಹಗಳು ಸೇರಿದಂತೆ ಒಟ್ಟು 34 ದೇಶಗಳ 342 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಜೊತೆಗೆ 12 ವಿದ್ಯಾರ್ಥಿ ಉಪಗ್ರಹಗಳು ಸೇರಿದಂತೆ ಒಟ್ಟು 124 ಸ್ಥಳೀಯ ಉಪಗ್ರಹಗಳನ್ನು ಭೂಮಿಯ ಕಕ್ಷೆಗೆ ಸೇರಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು