ಫಿರೋಜಾಬಾದ್ನಲ್ಲಿ ಸರ್ಕಾರಿ ಯೋಜನೆಯ ಲಾಭ ಪಡೆಯಲು ಅಣ್ಣನೊಬ್ಬ ತಂಗಿಯನ್ನೇ ಮದುವೆಯಾಗಿದ್ದಾನೆ.
ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆ ಅನ್ವಯ ಅಣ್ಣ ತಂಗಿ ತುಂಡ್ಲಾದಲ್ಲಿ ಮದುವೆಯಾಗಿದ್ದಾರೆ.
ತುಂಡ್ಲಾ ಬ್ಲಾಕ್ನ ಅಭಿವೃದ್ಧಿ ಕಚೇರಿಯಲ್ಲಿ ಕಳೆದ ವಾರ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಈ ವೇಳೆ ಮದುವೆಯಾದ ಜೋಡಿಗೆ ಬಟ್ಟೆ, 35 ಸಾವಿರ ನಗದು ಮತ್ತು ಸಾಕಷ್ಟು ಗೃಹೋಪಯೋಗಿ ವಸ್ತುಗಳನ್ನು ನೀಡಲಾಗಿತ್ತು. ಇದಕ್ಕಾಗಿ ಅಣ್ಣ ತಂಗಿಯನ್ನೇ ಮದುವೆಯಾಗಿದ್ದಾನೆ.
ಇಲ್ಲಿ ಮದುವೆಯಾದ ಜೋಡಿಗಳ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇವರಿಬ್ಬರು ಅಣ್ಣ ತಂಗಿ ಎನ್ನುವ ವಿಷಯ ಹೊರಬಂದಿದೆ. ಯುವಕನ ವಿರುದ್ಧ ದೂರು ದಾಖಲಾಗಿದೆ. ಜೊತೆಗೆ ಇವರ ಮದುವೆ ಪರಿಶೀಲಿಸಿದ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಲಾಗಿದೆ. ಒಟ್ಟಾರೆ 51 ಜೋಡಿಗಳು ಹಸೆಮಣೆ ಏರಿದ್ದು, ಇದರಲ್ಲಿ ನಾಲ್ಕು ಫೋರ್ಜರಿ ಪ್ರಕರಣ ದಾಖಲಾಗಿದೆ.