News Karnataka Kannada
Thursday, May 02 2024
ವಿದೇಶ

ಸ್ಪುಟ್ನಿಕ್ ಲೈಟ್ ಗೆ ಭಾರತದಲ್ಲಿ ಅನುಮೋದನೆ

Sputnik Delhi 5 7 21
Photo Credit :

ನವದೆಹಲಿ : ಭಾರತದ ಔಷಧ ನಿಯಂತ್ರಕ ಜನರಲ್‌‌‌, ಸ್ಪುಟ್ನಿಕ್‌‌ನ ಏಕ ಡೋಸ್‌‌ ಕೊರೊನಾ ಲಸಿಕೆಯಾ ಸ್ಪುಟ್ನಿಕ್‌‌‌ ಲೈಟ್‌‌‌‌‌, ಭಾರತೀಯ ಜನಸಂಖ್ಯೆಯ ಮೇಲೆ ಮೂರನೇ ಹಂತದ ಪ್ರಯೋಗ ನಡೆಸಲು ಅನುಮೋದನೆ ನೀಡಿದೆ.
ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿ ಈ ಹಿಂದೆ ಜುಲೈನಲ್ಲಿ ಸ್ಪುಟ್ನಿಕ್‌‌ ಲೈಟ್‌ಗೆ ತುರ್ತು ಬಳಕೆಗೆ ಅಧಿಕಾರವನ್ನು ನೀಡಿಲು ನಿರಾಕರಿಸಿದ್ದು, ದೇಶದಲ್ಲಿ ರಷ್ಯಾದ ಲಸಿಕೆಯ ಮೂರನೇ ಹಂತದ ಪ್ರಯೋಗದ ಅವಶ್ಯಕತೆಯನ್ನು ತಳ್ಳಿ ಹಾಕಿದ್ದರು.

ಸ್ಪುಟ್ನಿಕ್‌‌ ಲೈಟ್‌‌ಗಾಗಿ ಮೂರನೇ ಹಂತದ ಬ್ರಿಡ್ಜಿಂಗ್‌‌ ಪ್ರಯೋಗಗಳನ್ನು ಡಿಸಿಜಿಐನ ವಿಷಯ ತಜ್ಞರ ಸಮಿತಿ ಶಿಫಾರಸು ಮಾಡಿದೆ.

ಡಾ. ರೆಡ್ಡಿ ಅವರ ಪ್ರಯೋಗಾಲಯಗಳು ಭಾರತದಲ್ಲಿ ಸ್ಪುಟ್ನಿಕ್‌‌ ವಿ ಲಸಿಕೆಯ ಮೂರನೇ ಹಂತದ ಪ್ರಯೋಗಗಳು ನಡೆಸಲು ಕಳೆದ ವರ್ಷ ರಷ್ಯಾದ ನೇರ ಹೂಡಿಕೆನೊಂದಿಗೆ ಪಾಲುದಾರಿಕೆ ಹೊಂದಿದ್ದವು. ಭಾರತದಲ್ಲಿ ಏಕ ಶಾಟ್‌ ಲಸಿಕೆಯ ಮಾರುಕಟ್ಟೆ ದೃಢೀಕರಣಕ್ಕಾಗಿ ಸ್ಪುಟ್ನಿಕ್‌‌ ಲೈಟ್‌‌ನ ಮೂರನೇ ಹಂತದ ವೈದ್ಯಕೀಯ ಪ್ರಯೋಗದಿಂದ ಸುರಕ್ಷತೆ, ಇಮ್ಯುನೊಜೆನಿಸಿಟಿ ಹಾಗೂ ಪರಿಣಾಮಕಾರಿತ್ವದ ದತ್ತಾಂಶವನ್ನು ಸಲ್ಲಿಸುವಂತೆ ಎಸ್‌‌‌ ಇಸಿ ಡಾ.ರೆಡ್ಡಿಸ್‌ ಅವರನ್ನು ಕೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು