ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಸಂಜಯ್ ಭಟ್ಟಾಚಾರ್ಯ ರನ್ನು ಸ್ವಿಟ್ಜರ್ ಲೆಂಡ್ ಗೆ ಭಾರತದ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಟ್ಟಾಚಾರ್ಯ ಅವರು ಭಾರತೀಯ ವಿದೇಶಾಂಗ ಸೇವೆಯ 1987ನೇ ಬ್ಯಾಚ್ನ ಅಧಿಕಾರಿಯಾಗಿದ್ದರು ಎಂದು ತಿಳಿಸಿದೆ.
ಸ್ವಿಟ್ಜರ್ ಲೆಂಡ್ ನ ಭಾರತದ ರಾಯಭಾರಿಯಾಗಿ ಶೀಘ್ರದಲ್ಲೇ ನಿಯೋಜನೆಗೊಳ್ಳುವ ನಿರೀಕ್ಷೆಯಿದೆ. ಭಟ್ಟಾಚಾರ್ಯ ಅವರು ಈ ಮುನ್ನ ಟರ್ಕಿ ಮತ್ತು ಈಜಿಪ್ಟ್ ರಾಷ್ಟ್ರಕ್ಕೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ.