ಡೆಹ್ರಾಡೂನ್: ಕುಸಿದ ಸುರಂಗದಲ್ಲಿ ಕಳೆದ 13 ದಿನಗಳಿಂದ ಸಿಲುಕಿರುವ 41 ಕಾರ್ಮಿಕರನ್ನು ದೊಡ್ಡ ಪೈಪ್ ಮೂಲಕ ಹಗ್ಗ ಕಟ್ಟಿದ ಗಾಲಿ ಸ್ಟ್ರೆಚರ್ ನೆರವಿನಿಂದ ಕೆಲವೇ ಕ್ಷಣಗಳಲ್ಲಿ ಸುರಂಗದಿಂದ ಹೊರ ಕರೆತರಲಾಗುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಆರ್ಎಫ್)ದ ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಎನ್ಡಿಆರ್ಎಫ್ ಬಿಡುಗಡೆ ಮಾಡಿರುವ ವಿಡಿಯೋವೊಂದರಲ್ಲಿ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಒಬ್ಬೊಬ್ಬರಾಗಿ ಯಾವ ರೀತಿ ಹೊರ ತೆಗೆಯಲಾಗುತ್ತದೆ ಎಂಬುದನ್ನು ಪ್ರದರ್ಶಿಸಲಾಗಿದೆ. ಸ್ವತಃ ರಕ್ಷಣಾ ಕಾರ್ಯಕರ್ತರು ಪೈಪ್ ಒಳಗೆ ಹೋಗಿ ಗಾಲಿ ಸ್ಟ್ರೆಚರ್ನಲ್ಲಿ ಹೊರಗಡೆ ಬರುವ ದೃಶ್ಯವಿದೆ. ಪೈಪ್ಗಳನ್ನು ವೆಲ್ಡಿಂಗ್ ಮಾಡಿರುವ ಕಾರಣ ಕಾರ್ಮಿಕರು ತೆವಳುವಾಗ ತರಚಿ ಗಾಯಗಳಾಗಬಹುದು ಎಂಬ ಕಾರಣಕ್ಕೆ ಗಾಲಿ ಸ್ಟ್ರೆಚರ್ ಸಹಾಯದಿಂದ ಹೊರಗೆ ತರಲು ಎನ್ಡಿಆರ್ಎಫ್ ಸಲಕ ಸಿದ್ಧತೆಯನ್ನು ಮಾಡಿಕೊಂಡಿದೆ.
ಕಾರ್ಮಿಕರಿಗೆ ಒಬ್ಬೊಬ್ಬರಾಗಿ ತೆವಳುವ ಆಯ್ಕೆಯನ್ನು ಸಹ ಪರಿಗಣಿಸಿದ್ದರೂ ಅವರ ಆರೋಗ್ಯ ಸ್ಥಿತಿಯು ಸ್ಟ್ರೆಚರ್ ಮೇಲೆ ಹೆಚ್ಚು ಅವಲಂಬನೆಯಾಗಿರುತ್ತದೆ. ಇನ್ನು ಉತ್ತರಕಾಶಿ ಜಿಲ್ಲೆಯಲ್ಲಿರುವ ಸಿಲ್ಕ್ಯಾರ್ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಗಳು ಅಂತಿಮ ಘಟ್ಟಕ್ಕೆ ಬಂದಿದೆ. ಒಂದೇರಡು ದಿನಗಳಲ್ಲಿ ಕಾರ್ಮಿಕರು ಹೊರ ಬರುವ ಸಾಧ್ಯತೆಯಿದೆ.
उत्तराखंड : उत्तरकाशी में NDRF सुरंग में फंसे मजदूरों को बचाने के लिए पाइपलाइन का इस्तेमाल करेगा
◆ NDRF की टीम ने डेमो करके दिखाया #NDRF | #Uttarakhand | #UttarkashiRescue pic.twitter.com/AU4ESZecva
— Sumit Mamgain (@Mamgain_ji_1997) November 24, 2023