News Karnataka Kannada
Monday, April 29 2024
ದೇಶ

ಸತತ ಹನ್ನೊಂದನೇ ದಿನವೂ ಇಂಧನ ದರ ಸ್ಥಿರ

Petrol World Main 08072021
Photo Credit :

ದೇಶದಲ್ಲಿ ಇಂದು (ನವೆಂಬರ್ 15, ಸೋಮವಾರ) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸತತ ಹನ್ನೊಂದನೇ ದಿನವೂ ಇಂಧನ ದರ ಸ್ಥಿರವಾಗಿದೆ. ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಇತ್ತೀಚಿಗೆ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ್ದು, ಭಾರತದಲ್ಲಿ ಇಂಧನ ದರ ಭಾರಿ ಇಳಿಕೆ ಕಂಡಿದೆ.

ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವ್ಯತ್ಯಯ, ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿತ್ತು. ಆದರೆ, ಅನೇಕ ನಗರಗಳಲ್ಲಿ ಇಂಧನ ದರ ತಗ್ಗಿದೆ. ನವೆಂಬರ್ ೪ನೇ ತಾರೀಕಿನಂದು ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಮನ್ನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಅನೇಕ ರಾಜ್ಯಗಳು ವ್ಯಾಟ್ ಅನ್ನು ಕಡಿಮೆ ಮಾಡಿತ್ತು.

ನವದೆಹಲಿಯಲ್ಲಿ ಸೋಮವಾರ (ನವೆಂಬರ್ 15)ದಂದು ಪೆಟ್ರೋಲ್ -ಡೀಸೆಲ್ ಬೆಲೆ ಪರಿಷ್ಕರಿಸಿಲ್ಲ. ಇಂದು ಪೆಟ್ರೋಲ್ ದರ 103.97 ರು/ಲೀಟರ್ ಡೀಸೆಲ್ ದರವು 86.67 ರು/ಲೀಟರ್ ನಂತೆ ಇದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ.

ದೀಪಾವಳಿ ಸಂದರ್ಭದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆ ಆಯಿತು. ಆ ನಂತರದಲ್ಲಿ ಇಂಧನ ದರದಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು