ಶೃಂಗಸಭೆ 2021: ಭಾರತದಲ್ಲಿ ಇಂದು ಪ್ರಮುಖ ಸಮ್ಮೇಳನ

ಅಂತಾರಾಷ್ಟ್ರೀಯ ಹವಾಮಾನ ಶೃಂಗಸಭೆ-2021ರ ಅಂಗವಾಗಿ ಭಾರತವು ಇಂದು ಪ್ರಮುಖ ಸಮ್ಮೇಳನವೊಂದನ್ನು ಆಯೋಜಿಸಿದೆ. ಪ್ರಪಂಚದಾದ್ಯಂತದ ನೀತಿ ನಿರೂಪಕರು, ನಿಯಂತ್ರಕರು, ಉದ್ಯಮದ ನಾಯಕರು, ತಜ್ಞರು ಮತ್ತು ವಿಜ್ಞಾನಿಗಳು ಹವಾಮಾನ ಶೃಂಗಸಭೆಯ ಭಾಗವಾಗಲಿದ್ದಾರೆ.

ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್, ಜಿತೇಂದ್ರ ಸಿಂಗ್, ಎನ್‌ಐಟಿಐ ಆಯೋಗ್ ಸದಸ್ಯರಾದ ಡಾ.ವಿ.ಕೆ. ಸರಸ್ವತ್, ಸ್ಟರಲ್ ಹರಾಲ್ಡ್, ಪೆಡರ್‌ಸನ್, ಗ್ರೀನ್ ಸ್ಟಾಟ್ ಇಂಡಿಯಾದ ಅಧ್ಯಕ್ಷರು ನಾರ್ವೆಯ ಕೆಲವು ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಭೆಯ ಬಗ್ಗೆ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದ ನಿರ್ದೇಶಕರಾದ ಡಾ. ಆಶಿಶ್ ಕಿಶೋರ್ ಲೆಲೆ ಅವರು ಮಾತನಾಡಿದ್ದು, ಈ ಸಮ್ಮೇಳನವು ಭಾರತಕ್ಕೆ ಮಹತ್ವದ್ದಾಗಿದೆ.

ಪ್ರಪಂಚದ ಇತರೆ ಭಾಗವೂ ಗುರುತಿಸುವಂತಹ ಸಭೆ ಇದಾಗಲಿದೆ. ಹವಾಮಾನ ಬದಲಾವಣೆಯನ್ನು ತಗ್ಗಿಸುವ ತಂತ್ರಗಳ ಬಗ್ಗೆ ಮಾತನಾಡಲಾಗುವುದು. ಜೊತೆಗೆ ನಾವು ಅಳವಡಿಸಿಕೊಳ್ಳಬೇಕಾದ ಪರ್ಯಾಯ ತಂತ್ರಗಳ ಬಗ್ಗೆಯೂ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ.

ಇಂಥದ್ದೇ ಒಂದು ಪರ್ಯಾಯ ವ್ಯವಸ್ಥೆ ಹೈಡ್ರೋಜನ್ ಪವರ್ ಬಳಕೆಯಾಗಿದೆ. ಆ.15 ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಘೋಷಿಸಿದ್ದರು. ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳಿಂದ ಸಿಗುವ ಎಲೆಕ್ಟ್ರೋಲೈಜರ್ ಬಳಸಿ ನೀರಿನ ಅಣುವನ್ನು ಹೈಡ್ರೋಜನ್ ಹಾಗೂ ಆಮ್ಲಜನಕ ಘಟಕಗಳಾಗಿ ವಿಭಜಿಸುವ ಮೂಲಕ ಹಸಿರು ಹೈಡ್ರೋಜನ್ ಉತ್ಪಾದಿಸಬಹುದು.

ಮುಂದಿನ ದಿನಗಳಲ್ಲಿ ಇದು ಭಾರೀ ಬದಲಾವಣೆ ತರುವ ನಿರೀಕ್ಷೆಯಿದೆ. ಪ್ರಸ್ತುತ ಶೇ.85 ರಷ್ಟು ತೈಲ ಮತ್ತು ಶೇ.53ರಷ್ಟು ಅನಿಲ ಬೇಡಿಕೆಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇಂಧನ ಅಗತ್ಯಕ್ಕಾಗಿ ವಾರ್ಷಿಕವಾಗಿ 14 ಟ್ರಿಲಿಯನ್ ಖರ್ಚು ಮಾಡಲಾಗುತ್ತಿದೆ.

Sneha Gowda

Recent Posts

ಪ್ರಕಟಣೆಯಾದ ಸಂಶೋಧನಾ ಬರಹಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ: ಡಾ. ಸುಧಾಕರ್ ವೈ.ಎನ್

ವಿದ್ಯಾರ್ಥಿಗಳು ಪ್ರಕಟಿಸುವ ಸಂಶೋಧನಾ ಬರಹಗಳು ಉನ್ನತ ವೇತನ ಶ್ರೇಣಿಯ ವೃತ್ತಿ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಉಪಯುಕ್ತವಾಗುತ್ತವೆ ಎಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್…

44 seconds ago

ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಬಳಿಕವೇ ಸಿಇಟಿ ಫಲಿತಾಂಶ

ದ್ವಿತೀಯ ಪಿಯುಸಿಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಪಲಿತಾಂಶ ನಂತರವೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು…

11 mins ago

ಮಲ್ಲಮ್ಮ ಜಯಂತಿ ಆಚರಣೆಯ ದಿನ ಅಗೌರವ ತೋರಿದ ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ

ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆಯ ದಿನದಂದು ಬೇಜವಾಬ್ದಾರಿತನದಿಂದ ವರ್ತಿಸಿ…

16 mins ago

ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಸಾವು

ಬನಹಟ್ಟಿ ಪಟ್ಟಣದಲ್ಲಿ ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

50 mins ago

ಮುಂಗಾರು: ಭೂಮಿ ಹದ ಮಾಡಲು ಮುಂದಾದ ರೈತರು

ಹಲವು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಇದರಿಂದ ರೈತರು ಭೂಮಿ ಹದ ಮಾಡುವ ಕೆಲಸಕ್ಕೆ ಮುಂದಡಿ ಇಟ್ಟಿದ್ದಾರೆ.

1 hour ago

ಪಿಕಪ್ ವಾಹನ ಪಲ್ಟಿಯಾಗಿ 15 ಮಂದಿ ಸಾವು !

ಇಲ್ಲಿನ ಕವರ್ಧಾದಲ್ಲಿ ಪಿಕಪ್ ವಾಹನ ಪಲ್ಟಿಯಾಗಿ 15 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ತನಿಖೆ ನಡೆಸುತ್ತಿದ್ದಾರೆ.

1 hour ago