ಅಹಮದಾಬಾದ್ : ವ್ಯಾನ್ವೊಂದಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆ ಪರಿಣಾಮ ಐವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಈ ದುರ್ಘಟನೆ ಇಂದು ಬೆಳಗ್ಗೆ ಅಹಮದಾಬಾದ್ ಜಿಲ್ಲೆಯ ವಲಾನಾ ಹಳ್ಳಿ ಬಳಿ ನಡೆದಿದೆ.
ಆನಂದ್ ಜಿಲ್ಲೆಯ ಖಾಂಬಟ್ನಿಂದ ಎಂಟು ಜನ ವ್ಯಾನ್ನಲ್ಲಿ ಪ್ರಯಾಣಿಸುತ್ತಿದ್ದು, ವಲಾನಾ ಹಳ್ಳಿಯ ಸಮೀಪ ವ್ಯಾನ ಅಚಾನಕ್ ಆಗಿ ಪಕ್ಕಕ್ಕೆ ಚಲಿಸಿದೆ. ಈ ವೇಳೆ ಟ್ಯಾಂಕರ್ ವ್ಯಾನ್ಗೆ ಡಿಕ್ಕಿ ಹೊಡೆದಿದೆ.
ಸ್ಥಳದಲ್ಲಿ ನಾಲ್ವರು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇನ್ನೊಬ್ಬರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಕೋಥ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.