ಸೋಮವಾರ ಸತತ 6 ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಫೇಸ್ ಬುಕ್, ಇನ್ ಸ್ಟಾಗ್ರಾಂ, ಶುಕ್ರವಾರ ರಾತ್ರಿ 2 ಗಂಟೆಗಳ ಕಾಲ ಮತ್ತೆ ವ್ಯತ್ಯಯ ಉಂಟಾಗಿತ್ತು. ಈ ಸಮಸ್ಯೆ ಬಗ್ಗೆ ಫೇಸ್ ಬುಕ್ ಕ್ಷಮೆಯಾಚಿಸಿದೆ.
ಎರಡು ಗಂಟೆಗಳ ಕಾಲ ಮತ್ತೆ ಫೇಸ್ಬುಕ್ ಸ್ಥಗಿತಗೊಂಡಿದ್ದಕ್ಕೆ ಕ್ಷಮೆ ಯಾಚಿಸುತ್ತೇವೆ, ನಾವು ಸಮಸ್ಯೆಯನ್ನು ಪರಿಹರಿಸಿದ್ದೇವೆ, ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ ಎಂದಿದೆ.
ಇನ್ ಸ್ಟಾಗ್ರಾಂ ಕೂಡ ಕ್ಷಮೆ ಕೋರಿದ್ದು, ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳಬೇಕು. ನಮ್ಮೊಂದಿಗೆ ತಾಳ್ಮೆಯಿಂದ ಇರುವುದಕ್ಕೆ ಧನ್ಯವಾದಗಳು ಎಂದು ತಿಳಿಸಿದೆ.
ಸಾಮಾಜಿಕ ಜಾಲತಾಣಗಳ ಕಾರ್ಯಾಚರಣೆ ಗಳ ಬಗ್ಗೆ ಟ್ರ್ಯಾಕ್ ಮಾಡುವ ಡೌನ್ ಡಿಟೆಕ್ಟರ್, ಫೇಸ್ ಬುಕ್, ಇನ್ ಸ್ಟಾಗ್ರಾಮ್, ಮೆಸೆಂಜರ್ ಮತ್ತು ವಾಟ್ಸಪ್ ಬಳಕೆದಾರರ ಸಮಸ್ಯೆಗಳ ವರದಿ ಏರಿಕೆಯಾಗಿರುವ ಬಗ್ಗೆ ತೋರಿಸಿದೆ.
ಸೋಮವಾರ ಫೇಸ್ಬುಕ್, ವಾಟ್ಸ್ಆಯಪ್, ಇನ್ಸ್ಟಾಗ್ರಾಂ, ಮೆಸೆಂಜರ್ ಅಪ್ಲಿಕೇಷನ್ಗಳು 6 ಗಂಟೆಗಳ ಕಾಲ ಸ್ಥಗಿತಗೊಂಡಿದ್ದಕ್ಕೆ ಸಿಇಒ ಮಾರ್ಕ್ ಜುಕರ್ಬರ್ಗ್ ಗೆ 7 ಬಿಲಿಯನ್ ಡಾಲರ್ ನಷ್ಟವಾಗಿದೆ.
ಇದೇ ಸಮಯದಲ್ಲಿ ಟೆಲಿಗ್ರಾಂ ವಾಟ್ಸ್ ಆಪ್ ನ ಗ್ರಾಹಕರನ್ನು ತನ್ನೆಡೆಗೆ ಸೆಳೆದುಕೊಂಡಿದ್ದು, 70 ಮಿಲಿಯನ್ ಹೊಸ ಬಳಕೆದಾರರನ್ನು ತನ್ನ ತೆಕ್ಕೆಗೆ ಪಡೆದಿದೆ.