ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ವಾಟ್ಸ್ ಆಪ್, ಇನ್ ಸ್ಟಾಗ್ರಾಂ ಗಳ ಸರ್ವರ್ ಡೌನ್ ಆಗಿತ್ತು. ಇದೀಗ 6 ಗಂಟೆಗಳ ನಂತರ ಮತ್ತೆ ಯಥಾಸ್ಥಿತಿಗೆ ಮರಳಿದೆ.
ಭಾರತೀಯ ಕಾಲಮಾನ 9ಗಂಟೆ ಸುಮಾರಿಗೆ ಜಗತ್ತಿನ ಹಲವೆಡೆಯಿಂದ ಜನರು ವಾಟ್ಸ್ ಆಪ್, ಫೇಸ್ ಬುಕ್, ಇನ್ ಸ್ಟಾಗ್ರಾಂ ಕೆಲಸ ಮಾಡುತ್ತಿಲ್ಲ ಎಂದು ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದರು.
ಹೊಸ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಇದೀಗ 6 ಗಂಟೆ ನಂತರ ಫೇಸ್ ಬುಕ್, ವ್ಯಾಟ್ಸಪ್ ಮತ್ತು ಇನ್ ಸ್ಟಾಗ್ರಾಂ ಸೇವೆಗಳು ಮತ್ತೆ ಪುನಾರಂಭಗೊಂಡಿದೆ.
ಈ ಬಗ್ಗೆ ಜನರಲ್ಲಿ ಕ್ಷಮೆ ಕೇಳಿದ ವಾಟ್ಸ್ ಆಪ್, ನಾವು ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ವಾಟ್ಸಾಪ್ ಅನ್ನು ಮತ್ತೆ ಕೆಲಸ ಮಾಡಲು ಆರಂಭಿಸುತ್ತಿದ್ದೇವೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು. ಯಾವುದೇ ಅಪ್ಡೇಟ್ ಇದ್ದರು ತಿಳಿಸುತ್ತೇವೆ ಎಂದು ಟ್ವೀಟ್ ಮಾಡಿದೆ.