News Karnataka Kannada
Friday, May 03 2024
ದೇಶ

ಲಸಿಕೆ ಸೆಂಚುರಿ: ಪಾರಂಪರಿಕ ತಾಣಗಳಿಗೆ ತ್ರಿವರ್ಣ ದೀಪಾಲಂಕಾರದ ಚಿತ್ತಾರ

Color
Photo Credit :

ದೇಶದಲ್ಲಿ ಕೋವಿಡ್‌ ಲಸಿಕೆ ಹಾಕಲು ಆರಂಭಿಸಿ ಸುಮಾರು 9 ತಿಂಗಳಲ್ಲಿ 100 ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ನಿನ್ನೆ ಹೊಸ ದಾಖಲೆ ಬರೆದಿದೆ.

ಈ ಹೆಮ್ಮೆಯ ಕ್ಷಣವನ್ನು ಭಾರತೀಯ ಸಂಸ್ಕೃತಿ ಸಚಿವಾಲಯದ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಿಭಿನ್ನವಾಗಿ ಆಚರಿಸಿದೆ. ದೇಶದ 100 ಪ್ರಮುಖ ಪಾರಂಪರಿಕ ತಾಣಗಳಿಗೆ ಅಕ್ಟೋಬರ್ 21ರ ರಾತ್ರಿ ಕೇಸರಿ ,ಬಿಳಿ, ಹಸಿರು ಬಣ್ಣದ ದೀಪಾಲಂಕಾರ ಮಾಡಿ ಸಂಭ್ರಮಿಸಿದೆ. ಈ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕೊರೋನಾ ವಾರಿಯರ್ಸ್ ಗೆ ಗೌರವ ಸಲ್ಲಿಸಿದ್ದಾರೆ.

ದೀಪಾಲಂಕಾರ ಮಾಡಲಾಗಿದ್ದ ಪಾರಂಪರಿಕ ತಾಣ : ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಾದ ದೆಹಲಿಯ ಕೆಂಪುಕೋಟೆ, ಹುಮಾಯೂನ್​ ಸಮಾಧಿ, ಕುತುಬ್​ ಮಿನಾರ್​, ಉತ್ತರಪ್ರದೇಶದ ಆಗ್ರಾ ಕೋಟೆ, ಫತೇಪುರ್​ ಸಿಕ್ರಿ, ಗೋವಾದ ಸೇಂಟ್​ ಫ್ರಾನ್ಸಿಸ್​ ಆಫ್​ ಅಸ್ಸಿಸಿ ಚರ್ಚ್​, ಒಡಿಶಾದ ಕೋನಾರ್ಕ್​ ದೇವಾಲಯ, ತಮಿಳುನಾಡಿನ ಮಲ್ಲಪುರಂರಥ ದೇವಾಲಯ, ರಾಜಸ್ಥಾನದ ಚಿತ್ತೋರ್, ಕುಂಭಲ್ಗಡ್​ ಕೋಟೆಗಳು, ಬಿಹಾರದ ನಳಂದ ವಿಶ್ವವಿದ್ಯಾಲಯದ ಉತ್ಖನನ ಅವಶೇಷಗಳು, ಗುಜರಾತ್​​​ನ ಧೋಲವೀರ ಸೇರಿದಂತೆ ಇತ್ಯಾದಿಗಳಿಗೆ ತ್ರಿವರ್ಣ ದೀಪಾಲಂಕಾರ ಮಾಡಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು