News Karnataka Kannada
Sunday, May 05 2024
ದೇಶ

‘ರಾಷ್ಟ್ರೀಯ ನಗದೀಕರಣ ಯೋಜನೆ’ಗೆ ಚಾಲನೆ ಇಂದು

Nirmala Seetaraman Delhi 28 6 21
Photo Credit :

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ‘ರಾಷ್ಟ್ರೀಯ ನಗದೀಕರಣ ಯೋಜನೆ’ಗೆ (ಎನ್‌ಎಂಪಿ) ಚಾಲನೆ ನೀಡಲಿದ್ದಾರೆ.

ಕೇಂದ್ರ ಸರ್ಕಾರವು ತನ್ನ ಯಾವೆಲ್ಲ ಮೂಲಸೌಕರ್ಯ ಆಸ್ತಿಗಳನ್ನು ಮುಂದಿನ 4 ವರ್ಷಗಳಲ್ಲಿ ಮಾರಾಟ ಮಾಡಲಿದೆ ಎಂಬುದನ್ನು ಎನ್‌ಎಂಪಿ ತಿಳಿಸಲಿದೆ.

‘ಕೇಂದ್ರವು ಬಳಕೆ ಮಾಡುತ್ತಿಲ್ಲದ ಮೂಲಸೌಕರ್ಯ ಆಸ್ತಿಗಳ ವಿವರವು ಎನ್‌ಎಂಪಿಯಲ್ಲಿ ಇರಲಿದೆ. ಹೂಡಿಕೆ ದಾರರಿಗೆ ಇವುಗಳ ಬಗ್ಗೆ ಮಾಹಿತಿ ನೀಡುವುದಷ್ಟೇ ಅಲ್ಲದೆ, ಇದು ಕೇಂದ್ರಕ್ಕೆ ಮಧ್ಯಮಾವಧಿಯಲ್ಲಿ ಆಸ್ತಿಯನ್ನು ನಗದೀಕರಿಸಿಕೊಳ್ಳಲು ಮಾರ್ಗವೊಂದನ್ನು ತೋರಿಸುತ್ತದೆ’ ಎಂದು ನೀತಿ ಆಯೋಗವು ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು