News Karnataka Kannada
Wednesday, May 08 2024
ದೇಶ

ಮಹಿಳೆಯರಿಂದಲೇ ನಡೆಯಲಿದೆ ಒಲಾ ಸ್ಕೂಟರ್ ಕಾರ್ಖಾನೆ, 10,000ಕ್ಕೂ ಹೆಚ್ಚಿನವರಿಗೆ ಕೆಲಸ

New Project (7)
Photo Credit :

ಒಲಾ :  ಓಲಾ ಸ್ಕೂಟರ್ ಕಾರ್ಖಾನೆ ಸಂಪೂರ್ಣ ಮಹಿಳೆಯರಿಂದಲೇ ನಡೆಯಲಿದೆ. ಇಲ್ಲಿ 10 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗವಕಾಶ ನೀಡಲಾಗಿದೆ. ಈ ಬಗ್ಗೆ ಓಲಾ ಸಹಸಂಸ್ಥಾಪಕ ಹಾಗೂ ಸಿಇಒ ಭವಿಷ್ ಅಗರ್‌ವಾಲ್ ಮಾಹಿತಿ ನೀಡಿದ್ದಾರೆ.

ಕಾರ್ಖಾನೆಯಲ್ಲಿ ಸಂಪೂರ್ಣ ಮಹಿಳೆಯರು ಕೆಲಸ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದು ಸುಲಭದ ಮಾತಲ್ಲ. ಮಹಿಳೆಯರು ಸ್ವಾವಲಂಬಿಯಾಗಲು ಉದ್ಯೋಗ ಎಷ್ಟು ಮುಖ್ಯ ಎನ್ನುವುದನ್ನು ಮನಗಂಡ ಅಗರ್‌ವಾಲ್ ಇಷ್ಟು ದೊಡ್ಡ ಹೆಜ್ಜೆ ಇಟ್ಟಿದ್ದಾರೆ.

ಮಹಿಳೆಯರಿಗೆ ಆರ್ಥಿಕ ಅವಕಾಶ ಒದಗಿಸುವುದರಿಂದ ಅವರ ಜೀವನ ಮಾತ್ರ ಅಲ್ಲ, ಅವರನ್ನು ನಂಬಿದ ಕುಟುಂಬಗಳ ಜೀವನವೂ ಬದಲಾಗಲಿದೆ. ಜೀವನ ಸುಧಾರಿಸಲು ಸಣ್ಣ ಸಹಾಯ ಆಗಲಿದೆ. ಕಾರ್ಖಾನೆ ಕೆಲಸಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಿದರೆ ಭಾರತದ ಜಿಡಿಪಿ ಶೇ.27ರಷ್ಟು ಹೆಚ್ಚುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ ಎಂದಿದ್ದಾರೆ. ಇದೆಲ್ಲವನ್ನೂ ಸಾಕಾರಗೊಳಿಸಲು ಸಕ್ರಿಯ ಮತ್ತು ಪ್ರಜ್ಞಾಪೂರ್ವಕ ಪ್ರಯತ್ನ ಅವಶ್ಯವಾಗಿದೆ. ಅದರಲ್ಲೂ ಸಿದ್ಧವಸ್ತುಗಳ ಉತ್ಪಾದನೆ ಕ್ಷೇತ್ರದಲ್ಲಿ ಭಾಗವಹಿಸುವ ಮಹಿಳೆಯರ ಸಂಖ್ಯೆ ಕೇವಲ ಶೇ. 12ರಷ್ಟಿದ್ದು ಇದು ಅತಿ ಕಡಿಮೆ ಪ್ರಮಾಣ ಎಂದಿದ್ದಾರೆ. ಭಾರತವು ಪ್ರಪಂಚದ ಉತ್ಪಾದನಾ ಕೇಂದ್ರವಾಗಬೇಕಾದರೆ ನಾವು ನಮ್ಮ ಮಹಿಳಾ ಉದ್ಯೋಗಿಗಳಿಗೆ ಉದ್ಯೋಗ ಕೌಶಲ ಹೆಚ್ಚಿಸಲು ಆದ್ಯತೆ ನೀಡಬೇಕು ಎಂದಿದ್ದಾರೆ.

ಆತ್ಮನಿರ್ಭರ ಭಾರತಕ್ಕೆ ಆತ್ಮನಿರ್ಭರ ಮಹಿಳೆಯರು ಅವಶ್ಯಕ. ಓಲಾ ಕಾರ್ಖಾನೆ ಸಂಪೂರ್ಣವಾಗಿ ಮಹಿಳೆಯರಿಂದ ನಡೆಯುತ್ತದೆ ಎಂದು ತಿಳಿಸಲು ಹೆಮ್ಮೆಯಾಗುತ್ತಿದೆ. 10 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಫುಲ್ ಟೈಂ ಉದ್ಯೋಗವಕಾಶ ನೀಡಿದ್ದೇವೆ. ಓಲಾ ವಿಶ್ವದ ಅತಿದೊಡ್ಡ ಮಹಿಳಾ ಕಾರ್ಖಾನೆಯಾಗಲಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು