News Karnataka Kannada
Monday, April 29 2024
ದೇಶ

ಪಾಕಿಸ್ತಾನ್ ಪರ ಘೋಷಣೆ ಕೂಗಿದ ವ್ಯಕ್ತಿ ವಿರುದ್ದ ದೂರು ದಾಖಲು

Imran Khan 17 6 21
Photo Credit :
ಗುರುಗ್ರಾಮ : ಅಪಾರ್ಟ್ ಮೆಂಟ್ ಒಂದರ ಬಾಲ್ಕನಿಯಲ್ಲಿ ನಿಂತು  ಪಾಕಿಸ್ತಾನದ ಪರ ಘೋಷಣೆ ವ್ಯಕ್ತಿಯೋರ್ವನ ವಿರುದ್ಧ ಹರ್ಯಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅನ್ವರ್ ಸಯೀದ್ ಫೈಜುಲ್ಲಾ ಹಶ್ಮಿ ವಿರುದ್ಧ ನೆರೆ ಮನೆಯವರು ಪಾಕ್ ಪರ ಘೋಷಣೆ ಕೂಗಿದ ಆರೋಪ ಮಾಡಿದ್ದರು. ಐಪಿಸಿ 153 ಅಡಿಯಲ್ಲಿ ರಾಜೇಂದ್ರ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅನ್ವರ್ ಸಯೀದ್ ಫೈಜುಲ್ಲಾ ಹಶ್ಮಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ನಾಪತ್ತೆಯಾಗಿದ್ದು ಶೋಧಕಾರ್ಯಾಚರಣೆ ನಡೆಯುತ್ತಿದೆ ಎಂದು ಹರ್ಯಾಣ ಪೊಲೀಸರು ತಿಳಿಸಿದ್ದಾರೆ.

ಶನಿವಾರದಂದು, ಗುರುಗ್ರಾಮದಲ್ಲಿರುವ ರೆಸಿಡೆನ್ಷಿಯಲ್ ಸೊಸೈಟಿಯಲ್ಲಿದ್ದ ಈ ವ್ಯಕ್ತಿ ಮಕ್ಕಳಿಗೆ ಪಾಕಿಸ್ತಾನ ಪರ ಘೋಷಣೆ ಕೂಗುವಂತೆ ಕೇಳುತ್ತಿದ್ದ.

ಡಿಸಿಪಿ ಧೀರಜ್ ಸೇತಿಯಾ ಈ ಘಟನೆ ಬಗ್ಗೆ ಎಎನ್ಐ ಗೆ ಮಾಹಿತಿ ನೀಡಿದ್ದು, ಇಂಪೀರಿಯಲ್ ಗಾರ್ಡನ್ ಸೊಸೈಟಿಯ ನಿವಾಸಿ ಪಾಕ್ ಪರ “ಪಾಕಿಸ್ತಾನ್ ಜಿಂದಾಬಾದ್” ಎಂಬ ಘೋಷಣೆ ಕೂಗಿರುವ ವಿಡಿಯೋ ವೈರಲ್ ಆಗತೊಡಗಿದೆ.

ಈ ವ್ಯಕ್ತಿ ವಿರುದ್ಧ ದೂರು ನೀಡಿದ್ದ ನೆರೆ ಮನೆಯವರ ವಿರುದ್ಧ ಅನ್ವರ್ ಸಯೀದ್ ಫೈಜುಲ್ಲಾ ಹಶ್ಮಿಯ ಪತ್ನಿ ಪ್ರತಿ ದೂರು ನೀಡಿದ್ದು, ತನ್ನ ಪತಿ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಸೊಸೈಟಿಯ ಇತರ ನಿವಾಸಿಗಳ ವಿರುದ್ಧ ತಮಗೆ ಕಿರುಕುಳ ನೀಡುತ್ತಿರುವ ಆರೋಪವನ್ನೂ ಹಶ್ಮಿಯ ಪತ್ನಿ ಹೊರಿಸಿದ್ದಾರೆ. ಅಷ್ಟೇ ಅಲ್ಲದೇ ತನ್ನ ಪತಿ ವಿರುದ್ಧವೂ ಆಕೆ ಕೌಟುಂಬಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ.

“ಅನ್ವರ್ ನಿಜವಾಗಿಯೂ ಮಾನಸಿಕ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಯಾಗಿದ್ದಾನಾ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು