ಮಧ್ಯಪ್ರದೇಶ: 25 ವರ್ಷದ ಮಹಿಳೆ ಹಾಗೂ ಮೂವರು ಮಕ್ಕಳ ಮೃತದೇಹ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶ ಥಿಕಮ್ಘರ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಭಾನುವಾರ ಮೃತ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿ, ತನ್ನ ಪತ್ನಿ ಹಾಗೂ ಆರು ಹಾಗೂ ಮೂರು ವರ್ಷದ ಇಬ್ಬರು ಗಂಡು ಮಕ್ಕಳು, ಒಂದು ವರ್ಷದ ಮಗಳು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದ.
ತದನಂತರ ಹುಡುಕಾಟ ನಡೆಸಿದಾಗ ಆತನಿಗೆ ನಾಲ್ವರ ಮೃತದೇಹ ಕಾಶಿಮ್ರಾಜ್ ಜಿಲ್ಲೆಯ ಬಾವಿಯೊಂದರಲ್ಲಿ ಪತ್ತೆಯಾಗಿದೆ ಎಂದು ಪೊಲೀಸರಿಗೆ ವರದಿ ನೀಡಿದ್ದಾನೆ.
ಪೊಲೀಸರು ಪ್ರತಿಕ್ರಿಯಿಸಿ ಮಹಿಳೆಯು ಈಚೆಗೆ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದರು ಎಂದು ಕುಟುಂಬಸ್ಥರು ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಿದ್ದಾರೆ.