News Karnataka Kannada
Thursday, May 02 2024
ದೇಶ

ಭಾರತ ಪ್ರವಾಸ ಮಾಡಲು ವಿದೇಶಿಯರಿಗೆ ಅವಕಾಶ: ಪ್ರವಾಸಿಗರಿಗೆ ನಿಯಮ ಸಡಿಲಿಸಿದ ಗೃಹ ಸಚಿವಾಲಯ

Tourists
Photo Credit :

ಕೊರೋನಾ ಸೋಂಕಿನ ಹಿನ್ನೆಲೆ ಕಳೆದ ವರ್ಷ ಮಾರ್ಚ್ ನಿಂದ ವಿದೇಶಿ ಪ್ರಯಾಣಿಕರಿಗೆ ಹೇರಲಾಗಿದ್ದ ನಿರ್ಬಂಧ ಸಡಿಲಗೊಳಿಸಲು ಭಾರತ ತೀರ್ಮಾನಿಸಿದ್ದು, ವಿದೇಶಿ ಪ್ರವಾಸಿಗರಿಗೆ ಭಾರತೀಯ ತಾಣಗಳು ಮುಕ್ತಗೊಳ್ಳಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಅ.15ರಿಂದ ಚಾರ್ಟರ್ಡ್ ವಿಮಾನಗಳಲ್ಲಿನ ಪ್ರವಾಸಿಗರಿಗೆ ವೀಸಾ ನೀಡಲಾಗುತ್ತದೆ. ಚಾರ್ಟರ್ಡ್ ವಿಮಾನ ಹೊರತುಪಡಿಸಿ ಇತರ ವಿಮಾನಗಳಿಗೆ ನ.15ರಿಂದ ವೀಸಾ ನೀಡಲಾಗುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಈ ವೇಳೆ ಭಾರತಕ್ಕೆ ಬರುವ ಪ್ರವಾಸಿಗರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಇತ್ತೀಚೆಗಷ್ಟೆ ಪ್ರಧಾನಿ ಮೋದಿ ಗೋವಾದ ನಾಗರಿಕರ ಜೊತೆ ನಡೆಸಿದ ಸಂವಾದದಲ್ಲಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಹಾಗೂ 5 ಲಕ್ಷ ವಿದೇಶಿಗರಿಗೆ ಉಚಿತ ಪ್ರವಾಸಿ ವೀಸಾ ನೀಡಲಿದೆ ಎಂದು ತಿಳಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು