ಬೆಂಗಳೂರು : ಕೋವಿಡ್ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆ ಸೆಪ್ಟೆಂಬರ್ 1ರಿಂದ ಮೇಘಾಲಯದ ಎಲ್ಲ ಪ್ರವಾಸಿ ತಾಣಗಳ ಬಾಗಿಲುಗಳನ್ನು ಓಪನ್ ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.
ಕೋವಿಡ್ ಎರಡು ಡೋಸ್ ಲಸಿಕೆ ಪಡೆದ ಪ್ರವಾಸಿಗರು ಯಾವುದೇ ನಿಬಂಧನೆಗಳಿಲ್ಲದೇ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು ಎಂದು ಸಚಿವ ಸಂಪುಟದ ಸಭೆಯಲ್ಲಿ ತಿಳಿಸಲಾಗಿದೆ.
ಆದರೆ, ಒಂದೇ ಡೋಸ್ ಲಸಿಕೆ ಪಡೆದವರು ಮತ್ತು ಲಸಿಕೆ ಪಡೆಯದಿರುವವರು 72 ಗಂಟೆಗಳಿಗೆ ಮುನ್ನ ಮಾಡಿಸಿರುವ ಆರ್ಟಿಪಿಸಿಆರ್ ಅಥವಾ ಸಿಬಿಎನ್ಎಎಟಿ ಪರೀಕ್ಷೆ ಮಾಡಿಸಿರುವ ಕೋವಿಡ್- ನೆಗೆಟಿವ್ ವರದಿಯನ್ನು ಸಲ್ಲಿಸುವುದು ಎಂದು ಕಡ್ಡಾಯ ಸರ್ಕಾರ ತಿಳಿಸಿದೆ.
ಮೇಘಾಲಯದಲ್ಲಿ ನಿತ್ಯ 200ಕ್ಕಿಂತ ಕಡಿಮೆ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ಪ್ರಸ್ತುತ ರಾಜ್ಯದಲ್ಲಿ 2600 ಕೋವಿಡ್-19 ಸಕ್ರಿಯ ಪ್ರಕರಣಗಳಿವೆ.