ಭಾರತೀಯ ವಾಯುಪಡೆ ಸ್ಥಾಪನೆಯಾಗಿ ಇಂದಿಗೆ 89 ವರ್ಷಗಳಾಗಿದ್ದು, ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭ ಕೋರಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ವಾಯುಪಡೆಯ ಈ ವಿಶೇಷ ದಿನದಂದು ನಮ್ಮ ವಾಯು ಯೋಧರು ಹಾಗೂ ಅವರ ಕುಟುಂಬಗಳಿಗೆ ಶುಭಾಶಯ ಕೋರುತ್ತೇನೆ. ಭಾರತೀಯ ವಾಯುಪಡೆಯ ಧೈರ್ಯ ಮತ್ತು ಪರಿಶ್ರಮಕ್ಕೆ ಸಾಟಿಯೇ ಇಲ್ಲ ಎಂದಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಟ್ವೀಟ್ ಮಾಡಿದ್ದು, ವಾಯು ಯೋಧರು, ಅವರ ಕುಟುಂಬಗಳಿಗೆ ವಾಯುಪಡೆದಿನದ ಶುಭಾಶಯಗಳು. ಶಾಂತಿ ಮತ್ತು ಯುದ್ಧದ ಸಮಯದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ ವಾಯುಪಡೆ ಬಗ್ಗೆ ಭಾರತಕ್ಕೆ ಅತೀವವಾದ ಹೆಮ್ಮೆಯಿದೆ ಎಂದಿದ್ದಾರೆ.