News Karnataka Kannada
Friday, May 03 2024
ದೇಶ

ಭಯೋತ್ಪಾದಕರ ಡ್ರೋನ್‌ ತಡೆಗೆ ಸ್ವದೇಶೀ ಡ್ರೋನ್‌ ನಿರೋಧಕ ವ್ಯವಸ್ಥೆ ಅಳವಡಿಕೆ

Anti Drone 6 7 21
Photo Credit :

ನವದೆಹಲಿ : ಜಮ್ಮುವಿನಲ್ಲಿರುವ ವಾಯುನೆಲೆಯ ಮೇಲೆ ದಾಳಿ ಮಾಡಲು ಭಯೋತ್ಪಾದಕರು ಅನೇಕ ಬಾರಿ ಶಸ್ತ್ರ ಹೊಂದಿದ್ದ ಡ್ರೋನ್‌ಗಳನ್ನು ಗಡಿ ದಾಟಿಸಲು ಯತ್ನಿಸಿದ್ದರು. ಈ ಹಿನ್ನೆಲೆ ಉಗ್ರರ ಪ್ರಯತ್ನ ದಮನ ಮಾಡುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆ (ಐಎಎಫ್) 10 ಕೌಂಟರ್ ಮಾನವರಹಿತ ಡ್ರೋನ್​ ವ್ಯವಸ್ಥೆಗಳನ್ನು (ಸಿಯುಎಎಸ್) ಪ್ರಾರಂಭಿಸಲಿದೆ.ಈ ವ್ಯವಸ್ಥೆ ಮೇಡ್ ಇನ್ ಇಂಡಿಯಾದ ಮೂಲಕ ತಯಾರಾಗಲಿದೆ. ಡ್ರೋನ್ ವಿರೋಧಿ ವ್ಯವಸ್ಥೆಯ ಮುಖ್ಯ ಆಯುಧ ಲೇಸರ್ ಆಧಾರಿತ ಡೈರೆಕ್ಟ್ ಎನರ್ಜಿ ವೆಪನ್ ಆಗಿರಬೇಕು. ಐಎಎಫ್ ಈ ವ್ಯವಸ್ಥೆಗಳನ್ನು ವಿವಿಧ ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಿದೆ. ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಯೋಜನೆ ರೂಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.”ಈ ವ್ಯವಸ್ಥೆಯ ಮೂಲಕ ಸೇನೆಗೆ ಎಚ್ಚರಿಕೆ ರವಾನೆಯಾಗಬೇಕು. ಜೊತೆಗೆ ಸಂಯೋಜಿತ ಸಾಂದರ್ಭಿಕ ಚಿತ್ರಗಳನ್ನು ರವಾನಿಸುವಂತಿರಬೇಕು” ಎಂದು ಆರ್‌ಎಫ್‌ಐ ಹೇಳಿದೆ. ಜಮ್ಮು ವಾಯುನೆಲೆಗೆ ಬಾಂಬ್​ ದಾಳಿ ನಡೆಸಲು ಭಯೋತ್ಪಾದಕರು ಎರಡು ಡ್ರೋನ್‌ಗಳನ್ನು ಈ ಹಿಂದೆ ಬಳಸಿದ್ದರು. ಇನ್ನು, ದಾಳಿ ನಡೆಸಿದ್ದ ಸಂದರ್ಭದಲ್ಲಿ ಕಟ್ಟಡವೊಂದಕ್ಕೆ ಹಾನಿಯಾಗಿದ್ದು, ಇಬ್ಬರು ಸಿಬ್ಬಂದಿಗೆ ಗಾಯವಾಗಿತ್ತು. ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು