ಕೋಲ್ಕತಾ: ಬರ್ದ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಓರ್ವ ಕೋವಿಡ್ ರೋಗಿಯು ಸಾವನ್ನಪ್ಪಿದ್ದು,ರೋಗಿಯನ್ನು ಪೂರ್ವ ಬರ್ದ್ವಾನ್ ಜಿಲ್ಲೆಯ ನಿವಾಸಿ ಸಂಧ್ಯಾ ರಾಯ್ (60) ಎಂದು ಗುರುತಿಸಲಾಗಿದೆ.
ಸಾಂಕ್ರಾಮಿಕ ರೋಗ ಉಲ್ಬಣಗೊಂಡಾಗಿನಿಂದ ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಯನ್ನು ವಿಶೇಷ ವಾರ್ಡ್ ಆಗಿ ಪರಿವರ್ತಿಸಲಾಗಿದೆ.
ಈ ಘಟನೆಯು ರೋಗಿಗಳು ಹಾಗೂ ಸಂಬಂಧಿಕರಲ್ಲಿ ಭೀತಿಯನ್ನು ಉಂಟು ಮಾಡಿದೆ.ಆಸ್ಪತ್ರೆಯ ರಾಧಾರಾಣಿ ವಾರ್ಡ್ನಲ್ಲಿ ಶನಿವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆರಂಭದಲ್ಲಿ ರೋಗಿಗಳ ಸಂಬಂಧಿಕರು ಬೆಂಕಿ ನಂದಿಸಲು ಯತ್ನಿಸಿದರು. ಒಂದು ಅಗ್ನಿಶಾಮಕ ದಳವನ್ನು ಕರೆಸಲಾಯಿತು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದರು.
ಒಂದು ಗಂಟೆಯ ನಂತರ ಅವರು ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಆಸ್ಪತ್ರೆಯು ತಮ್ಮ ಕಡೆಯಿಂದ ಯಾವುದೇ ವೈಫಲ್ಯವನ್ನು ಆಗಿಲ್ಲ ಎಂದು ಹೇಳಿಕೊಂಡಿದೆ. ಕಾರಣವನ್ನು ಕಂಡುಹಿಡಿಯಲು ಐದು ಸದಸ್ಯರ ತನಿಖಾ ತಂಡವನ್ನು ರಚಿಸಲಾಗಿದೆ.
ಫೋರೆನ್ಸಿಕ್ ತನಿಖೆಯನ್ನೂ ನಡೆಸಲಾಗುವುದು ಎಂದು ಬರ್ದ್ವಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲ ಪ್ರಬೀರ್ ಸೇನ್ಗುಪ್ತಾ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.