ಟೋಕಿಯೋ, – ಪದಕ ಗೆಲ್ಲಲು ತೀವ್ರ ಸೆಣಸಾಟ ನಡೆಸುತ್ತಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ಗೆ ಲಗ್ಗೆ ಇಡುವ ಮೂಲಕ ಒಲಿಂಪಿಕ್ಸ್ ನಲ್ಲಿ ಮತ್ತೊಂದು ಪದಕ ಗೆಲ್ಲುವತ್ತ ಮುನ್ನಡೆದಿದ್ದಾರೆ. ಈಗಾಗಲೇ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಪಿ.ವಿ.ಸಿಂಧು ಅವರು ಈ ಬಾರಿ ಸ್ವರ್ಣ ಪದಕ ಗೆಲ್ಲುವತ್ತ ಚಿತ್ತ ಹರಿಸಿದ್ದಾರೆ.
ಇಂದು ನಡೆದ ಕ್ವಾರ್ಟರ್ಫೈನಲ್ನಲ್ಲಿ ಜಪಾನ್ನ ಅಂಕೆ ಯಮಗುಚ್ಚಿ ಅವರ ಸವಾಲನ್ನು ಎದುರಿಸಿದ ಸಿಂಧು ಮೊದಲ ಸೆಟ್ನಲ್ಲಿ 21-13 ರಿಂದ ಸುಲಭ ಗೆಲುವು ಸಾಧಿಸಿದರು. ಆದರೆ ನಂತರ ಸುತ್ತಿನಲ್ಲಿ ಸಿಂಧುಗೆ ಯಮಗುಚಿ ಭಾರೀ ಪೈಪೋಟಿ ನೀಡಿದರೂ 22-20 ರಿಂದ ಗೆಲ್ಲುವ ಮೂಲಕ ಸೆಮಿಫೈನಲ್ಗೆ ಲಗ್ಗೆ ಇಡುವ ಮೂಲಕ ಗಮನ ಸೆಳೆದಿದ್ದಾರೆ.