News Karnataka Kannada
Tuesday, May 07 2024
ವಿದೇಶ

ಪದಕ ಗೆಲ್ಲುವ ಆಸೆ ಜೀವಂತವಾಗಿರಿಸಿದ ಪಿ.ವಿ.ಸಿಂಧು

P V Sindhu
Photo Credit :

ಟೋಕಿಯೋ, – ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಅಜೇಯ ಓಟವನ್ನು ಮುಂದುವರೆಸಿರುವ ಭಾರತದ ಬ್ಯಾಡ್ಮಿಂಟನ್‍ನ ಮಹಾತಾರೆ ಪಿ.ವಿ.ಸಿಂಧು ಅವರು ಕ್ವಾರ್ಟರ್‍ಫೈನಲ್ ತಲುಪುವ ಮೂಲಕ ಪದಕ ಗೆಲ್ಲುವ ಆಸೆಯನ್ನು ಮೂಡಿಸಿದ್ದಾರೆ. ಇಂದಿಲ್ಲಿ ನಡೆದ ಪ್ರೀ ಕ್ವಾರ್ಟರ್ ಫೈನಲ್‍ನಲ್ಲಿ ಡೆನ್ಮಾರ್ಕ್‍ನ ಮಿಯಾ ಬ್ಲಿಚ್ ಫೆಲ್ಡ್ಟ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 41 ನಿಮಿಷಗಳಲ್ಲಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‍ಫೈನಲ್ ತಲುಪಿರುವ ಪಿ.ವಿ.ಸಿಂಧು, ಕ್ವಾರ್ಟರ್ ಫೈನಲ್‍ನಲ್ಲಿ ಜಪಾನ್‍ನ ಯಮಗುಚಿಯವರ ಸವಾಲನ್ನು ಎದುರಿಸಲಿದ್ದಾರೆ.
ಪ್ರೀ ಕ್ವಾರ್ಟರ್ ಫೈನಲ್‍ನಲ್ಲಿ ಆರಂಭದಿಂದಲೂ ಡೆನ್ಮಾರ್ಕ್‍ನ ಮಿಯಾರ ವಿರುದ್ಧ ಉತ್ತಮ ಸೆಣಸಾಟ ನಡೆಸಿದ ಪಿ.ವಿ.ಸಿಂಧು 21-15, 21-13ನೇರ ಸೆಟ್‍ಗಳ ಮೂಲಕ ಗೆಲ್ಲುವ ಮೂಲಕ ಮಹಿಳಾ ಸಿಂಗಲ್ಸ್‍ನ ಕ್ವಾರ್ಟರ್‍ಫೈನಲ್‍ಗೆ ತಲುಪಿದ್ದಾರೆ.ಟೋಕಿಯೋ ಒಲಿಂಪಿಕ್ಸ್‍ನ ಆರಂಭಿಕ ಪಂದ್ಯದಲ್ಲಿ ಇಸ್ರೇಲ್‍ನ ಆಟಗಾರ್ತಿ ಪೊಲಿಕಪೆರ್ವಾ ವಿರುದ್ಧ 21-7, 21-10 ನೇರ ಸೆಟ್‍ಗಳಿಂದ ಗೆದ್ದು ಶುಭಾರಂಭ ಮಾಡಿದ ಸಿಂಧು ನಂತರ ನಂತರ ನಡೆದ ಪಂದ್ಯದಲ್ಲಿ ಹಾಂಗ್‍ಕಾಂಗ್ ಆಟಗಾರ್ತಿ ವಿರುದ್ಧ ಗೆಲುವು ಸಾಧಿಸಿದರು. ನಂತರ ನಡೆದ ಪಂದ್ಯದಲ್ಲಿ ಆಟಗಾರ್ತಿ ಪುಲಿಕಪೆರ್ವಾಪೊ ವಿರುದ್ಧ 21-9,21-16 ನೇರ ಸೆಟ್‍ಗಳ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಪ್ರಿ ಕ್ವಾರ್ಟರ್ ಫೈನಲ್‍ಗೆ ಲಗ್ಗೆ ಇಟ್ಟಿದ್ದ ಸಿಂಧು ಅವರು ಇಂದು ಡೆನ್ಮಾರ್ಕ್ ಆಟಗಾರ್ತಿ ಮಿಯಾ ವಿರುದ್ಧ 21-15, 21-13ರಿಂದ ಗೆಲುವು ಸಾಧಿಸಿದ್ದು ನಾಳೆ ಜಪಾನ್ ಆಟಗಾರ್ತಿಯ ಸವಾಲನ್ನು ಎದುರಿಸಲಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಪಿ.ವಿ.ಸಿಂಧು ಪದಕ ಸುತ್ತಿಗೆ ಪ್ರವೇಶಿಸಲು ಒಂದೇ ಮೆಟ್ಟಿಲು ಬಾಕಿ. ನಾಳೆಯ ಪಂದ್ಯದಲ್ಲಿ ಸಿಂಧು ಗೆಲುವು ಸಾಧಿಸಿದರೆ ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕವನ್ನು ಖಾತ್ರಿಗೊಳಿಸಿಕೊಳ್ಳಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು