News Karnataka Kannada
Saturday, May 04 2024
ದೇಶ

ಪತಿ–ಪತ್ನಿ ನಡುವೆ ಬಲವಂತದ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಛತ್ತೀಸ್‌ಗಡ ಹೈಕೋರ್ಟ್‌

Chhattisgarh Hc 27082021
Photo Credit :

ನವದೆಹಲಿ: ಪತಿ ಮತ್ತು ಪತ್ನಿ ನಡುವೆ ನಡೆಯುವ ಲೈಂಗಿಕ ಕ್ರಿಯೆಯು ಬಲವಂತದಿಂದಲೇ ನಡೆದಿದ್ದರೂ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ಛತ್ತೀಸ್‌ಗಡ ಹೈಕೋರ್ಟ್‌ ಹೇಳಿದೆ.

ಕಾನೂನುಬದ್ಧವಾಗಿ ವಿವಾಹವಾದ ದಂಪತಿ ನಡುವೆ, ಹೆಣ್ಣಿನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆದಿದ್ದು, ಹೆಣ್ಣಿಗೆ 18 ವರ್ಷ ಮೀರಿದ್ದರೆ ಅತ್ಯಾಚಾರ ಎನ್ನಲಾಗದು ಎಂದು ಹೇಳಿದ ಕೋರ್ಟ್, ಈ ಆರೋಪದಿಂದ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ.

‘ವೈವಾಹಿಕ ಅತ್ಯಾಚಾರ’ಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ವೇಳೆ ಕೋರ್ಟ್‌ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಉಲ್ಲೇಖಿತ ಪ್ರಕರಣದಲ್ಲಿ ಮಹಿಳೆಯು ದೂರುದಾರರು ಕಾನೂನುಬದ್ಧವಾಗಿ ವಿವಾಹವಾಗಿದ್ದ ಮಹಿಳೆಯಾಗಿದ್ದಾರೆ. ಹೀಗಾಗಿ, ಲೈಂಗಿಕ ಕ್ರಿಯೆಯು ಅಪರಾಧ ಅಥವಾ ಅತ್ಯಾಚಾರ ಆಗುವುದಿಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು