ದೇಶದಲ್ಲಿ ಕೊರೊನಾ ಲಸಿಕೆ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಎಂಬಂತೆ ಕೋವಿಡ್ 19 ಮೊದಲ ಡೋಸ್ ಪಡೆದವರಿಗಿಂತ ಸಂಪೂರ್ಣ ಕೊರೊನಾ ಲಸಿಕೆಯನ್ನು ಸ್ವೀಕರಿಸಿದವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ದತ್ತಾಂಶಗಳು ಮಾಹಿತಿ ನೀಡಿವೆ.
ಮಂಗಳವಾರ ರಾತ್ರಿಯವರೆಗೆ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ ದೇಶದಲ್ಲಿ 755.4 ಮಿಲಿಯನ್ ಮಂದಿ ಈವರೆಗೆ ಕನಿಷ್ಟ ಮೊದಲ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಇನ್ನುಳಿದಂತೆ 380.7 ಮಿಲಿಯನ್ ಮಂದಿ ಕೋವಿಡ್ ಲಸಿಕೆಯ ಎರಡೂ ಡೋಸ್ಗಳನ್ನು ಸ್ವೀಕರಿಸಿದ್ದಾರೆ. ಕೋವಿನ್ ಡ್ಯಾಶ್ಬೋರ್ಡ್ನಲ್ಲಿ ಈ ಮಾಹಿತಿಯನ್ನು ಕಾಣಬಹುದಾಗಿದೆ.
ದೇಶದಲ್ಲಿ 940 ಮಿಲಿಯನ್ ವಯಸ್ಕರಿದ್ದು ಇದರ ಅನುಸಾರ ದೇಶದಲ್ಲಿ 40.3 ಪ್ರತಿಶತ ಮಂದಿ ಸಂಪೂರ್ಣ ಡೋಸ್ ಲಸಿಕೆಯನ್ನು ಪಡೆದಂತಾಗಿದೆ. 40.2 ಪ್ರತಿಶತ ಮಂದಿ ಮೊದಲ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ.
ಮಂಗಳವಾರ ದೇಶದಲ್ಲಿ 10,351 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ. ಇದು ಕಳೆದ 274 ದಿನಗಳಲ್ಲಿ ಅತ್ಯಂತ ಕನಿಷ್ಟ ಕೋವಿಡ್ ಪ್ರಕರಣ ಎಂದು ಹೇಳಲಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 34.5 ಮಿಲಿಯನ್ ಆಗಿದೆ. ಹಾಗೂ ಈವರೆಗೆ ಒಟ್ಟು 4,64,213 ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ.