ದೇಶದಲ್ಲಿ 100 ಕೋಟಿ ಲಸಿಕೆ ನೀಡಿದ ಹೆಗ್ಗಳಿಕೆ ಬೆನ್ನಲ್ಲೇ ಕೊರೊನಾ ಸೋಂಕು ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ 24 ಗಂಟೆಯಲ್ಲಿ 18,454 ಸೋಂಕು ಪ್ರಕರಣಗಳು ದೃಢಪಟ್ಟರೆ 160 ಮಂದಿ ಅಸುನೀಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 3,41,27,450ಕ್ಕೆ ಏರಿಕೆಯಾದರೆ, ಸಾವಿನ ಸಂಖ್ಯೆ 4,52,811ಕ್ಕೆ ಏರಿದೆ.
ಒಂದೇ ದಿನದಲ್ಲಿ 17,561 ಮಂದಿ ಸೋಂಕಿನಿಂದ ಗುಣಮುಖಿತರಾಗಿದ್ದು, ಒಟ್ಟಾರೆ ಗುಣಮುಖಿತರ ಸಂಖ್ಯೆ 3,34,95,808ಕ್ಕೆ ಏರಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1,78,831ಕ್ಕೆ ಏರಿಯಾಗಿದೆ.