News Karnataka Kannada
Friday, May 17 2024
ದೇಶ

ತಾಲಿಬಾನಿಗಳ ವಶವಾದ ಅಮೇರಿಕದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು

Photo Credit :

ಕಾಬೂಲ್, ; ಹಿಂಸಾಪ್ರವೃತ್ತಿಯ ತಾಲಿಬಾನಿಗಳ ಆಡಳಿತಕ್ಕೆ ಹೆದರಿದ ಆಫ್ಘಾನಿಸ್ತಾನದ ಪ್ರಜೆಗಳು ಹಂತ ಹಂತವಾಗಿ ದೇಶ ತೊರೆಯಲಾರಂಭಿಸಿದ್ದಾರೆ. ಈ ನಡುವೆ ಅಮೆರಿಕಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಬಂಡುಕೋರರ ಕೈ ಸೇರಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಆಫ್ಘಾನಿಸ್ತಾನದ ಅಧ್ಯಕ್ಷರು, ಉಪಾಧ್ಯಕ್ಷರು ಮೊನ್ನೆ ದೇಶ ತೊರೆದ ಬಳಿಕ ಆಡಳಿತದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಬಂಡುಕೋರರು ಅಧ್ಯಕ್ಷರ ಅರಮನೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದು, ಹಂಗಾಮಿ ಆಡಳಿತ ಜಾರಿ ಮಾಡಿದ್ದಾರೆ.
ಇನ್ನು ಮುಂದೆ ಆಫ್ಘನ್‍ನಲ್ಲಿ ಶರಿಯತ್ ಕಾನೂನುಗಳು ಜಾರಿಯಲ್ಲಿರಲಿವೆ ಎಂದು ಘೋಷಿಸಲಾಗಿದೆ. ಈವರೆಗಿನ ಆಡಳಿತದಲ್ಲಿ ಸುರಕ್ಷಿತವಾಗಿದ್ದ ಪ್ರಜೆಗಳಿಗೆ ಆತಂಕ ಸೃಷ್ಟಿಯಾಗಿದೆ. ತೀವ್ರಗಾಮಿಗಳು ಬಂದೂಕಿನ ನಳಿಕೆ ಹಾಗೂ ಖಡ್ಗದ ಹರಿತದ ತುದಿಯಲ್ಲಿ ಆಡಳಿತ ನಡೆಸುವ ಸಾಧ್ಯತೆ ಇದೆ. ಈವರೆಗೂ ತಮ್ಮದೇ ಕಾನೂನು ತಮ್ಮದೇ ಆಡಳಿತ ಎಂದು ಸಾವಿರಾರು ಮಂದಿಯ ಹತ್ಯೆ ಮಾಡಿರುವ ತಾಲಿಬಾನಿಗಳ ಕೈಗೆ ಅಧಿಕೃತವಾದ ಆಡಳಿತವೂ ಸಿಕ್ಕಿರುವುದು ಆತಂಕ ಮೂಡಿಸಿದೆ. ಹೀಗಾಗಿ ಲಕ್ಷಾಂತರ ಮಂದಿ ಬ್ಯಾಂಕಿನಲ್ಲಿಟ್ಟಿದ್ದ ಹಣವನ್ನು ವಿತ್ ಡ್ರಾ ಮಾಡಿಕೊಂಡು ದೇಶ ತೊರೆಯುತ್ತಿದ್ದಾರೆ. ಸರ್ಕಾರಿ ನೌಕರರು, ತಜ್ಞರು, ಖಾಸಗಿ ಕಂಪನಿಗಳ ಮುಖ್ಯಸ್ಥರು, ಅಧಿಕಾರಿಗಳು ದೇಶ ಬಿಟ್ಟು ಹೋಗುತ್ತಿದ್ದಾರೆ. ಅಂತರ ರಾಷ್ಟ್ರೀಯ ವಿಮಾನಗಳ ಸಂಚಾರವನ್ನು ರದ್ದು ಪಡಿಸಿದ ಬಳಿಕವಂತೂ ರಸ್ತೆ, ರೈಲು ಮಾರ್ಗಗಳಲ್ಲಿ ಜನ ದಟ್ಟಣೆ ಹೆಚ್ಚಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು