ದೆಹಲಿ : ಕೋವ್ಯಾಕ್ಸಿನ್ ಲಸಿಕೆ ಕುರಿತು ಭಾರತ್ ಬಯೋಟೆಕ್ನಿಂದ ಹೆಚ್ಚುವರಿ ಮಾಹಿತಿ ನಿರೀಕ್ಷಿಸುತ್ತಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ವ್ಯಾಕ್ಸಿನ್ ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಮಾಹಿತಿ ಅಗತ್ಯವಿದೆ, ಅದರ ನಂತರ ಮೌಲ್ಯಮಾಪನ ಮಾಡಲಾಗುವುದು.
ತುರ್ತು ಬಳಕೆಗಾಗಿ ವ್ಯಾಕ್ಸಿನ್ ಬಳಸುವುದರಿಂದ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ಕೋವ್ಯಾಕ್ಸಿನ್ ಅಭಿವೃದ್ಧಿಪಡಿಸಿರುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ತನ್ನ ಲಸಿಕೆಗಾಗಿ ಏ.18 ರಂದು ಇಒಐನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿತ್ತು.
ತುರ್ತು ಪರಿಸ್ಥಿತಿ ಬಳಕೆಯ ಪಟ್ಟಿಯಲ್ಲಿ ಕೋವ್ಯಾಕ್ಸಿನ್ ಸೇರಲು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸಿಗಾಗಿ ಅನೇಕರು ಕಾಯುತ್ತಿದ್ದಾರೆ. ಆದರೆ ನಾವು ಆರೋಗ್ಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ತುರ್ತು ಬಳಕೆಗಾಗಿ ಕೋವ್ಯಾಕ್ಸಿನ್ ಶಿಫಾರಸು ಮಾಡುವ ಮುನ್ನ, ಅದರ ಸಂಪೂರ್ಣ ಮೌಲ್ಯಮಾಪನ ಮಾಡಬೇಕು ಎಂದು ಆರೋಗ್ಯ ಸಂಸ್ಥೆ ತಿಳಿಸಿದೆ.