News Karnataka Kannada
Thursday, May 02 2024
ದೇಶ

ಕೊರೋನಾ ಲಸಿಕೆ ರಫ್ತು ಮಾಡಲು ಭಾರತ ತೀರ್ಮಾನಿಸಿರುವುದು ಮಹತ್ವದ ನಿರ್ಧಾರ : ವಿಶ್ವ ಆರೋಗ್ಯ ಸಂಸ್ಥೆ

Covishield
Photo Credit :

ಡೆಡ್ಲಿ ಕೊರೋನಾ ವಿರುದ್ಧ ಹೋರಾಡುವ ಲಸಿಕೆಗಳನ್ನು ರಫ್ತು ಮಾಡಲು ಭಾರತ ತೀರ್ಮಾನಿಸಿರುವುದು ಮಹತ್ವದ ನಿರ್ಧಾರ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಂ ಗೆಬ್ರೇಯೇಸಸ್ ಬೆನ್ನು ತಟ್ಟಿದ್ದಾರೆ. ಈ ವರ್ಷದ ಅಂತ್ಯದೊಳಗೆ ವಿಶ್ವದ ಪ್ರತಿ ರಾಷ್ಟ್ರವು ತನ್ನ ಜನಸಂಖ್ಯೆಯ ಶೇ.40 ರಷ್ಟು ಮಂದಿಗೆ ಲಸಿಕೆ ನೀಡುವ ಗುರಿಗೆ ಭಾರತದ ಈ ನಿರ್ಧಾರ ನೆರವಾಗಲಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಲಸಿಕೆ ಲಭ್ಯವಾಗುತ್ತಿರುವ ಕಾರಣ ‘ಲಸಿಕೆ ಮೈತ್ರಿ’ ಕಾರ್ಯಕ್ರಮದಡಿ ಅಗತ್ಯವಿರುವ ದೇಶಗಳಿಗೆ ಲಸಿಕೆ ರಫ್ತು ಮಾಡಲು ತೀರ್ಮಾನಿಸಲಾಗಿದೆ ಎಂದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವೀಯ ಸೋಮವಾರ ತಿಳಿಸಿದ್ದರು.

ದೇಶದಲ್ಲಿನ ಅಗತ್ಯತೆಗಳನ್ನು ಪರಿಗಣಿಸಿ ಉಳಿದ ಡೋಸ್ ಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಭಾರತ ಈಗಾಗಲೇ 6.63 ಕೋಟಿ ಡೋಸ್ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಿದೆ. ಕೋವಿಡ್‌ನ ಎರಡನೇ ಅಲೆ ಸಮಯದಲ್ಲಿ ಭಾರತ ಲಸಿಕೆಗಳ ರಫ್ತನ್ನು ಸ್ಥಗಿತಗೊಳಿಸಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು