News Karnataka Kannada
Monday, April 29 2024
ದೇಶ

ಕೋವ್ಯಾಕ್ಸಿನ್ ಲಸಿಕೆಯ ಬಳಕೆ ಎರಡು ವರ್ಷದವರೆಗೆ ವಿಸ್ತರಣೆ : ಕೇಂದ್ರ ಸರ್ಕಾರ

Covaxin
Photo Credit :

ಭಾರತ್ ಬಯೋಟೆಕ್ ಸಂಸ್ಥೆಗೆ ದೀಪಾವಳಿ ಹಬ್ಬಕ್ಕೆ ಬಂಪರ್ ಉಡುಗೊರೆ ದೊರೆತಿದೆ. ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಮನ್ನಣೆ ದೊರೆತಿದ್ದು, ಕೇಂದ್ರ ಸರ್ಕಾರ ಲಸಿಕೆಯ ಅವಧಿಯನ್ನು 12 ತಿಂಗಳಿಗೆ ವಿಸ್ತರಿಸಿದೆ.

ಹೌದು.. ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಯ ಪಟ್ಟಿಗೆ ಸೇರಿಸಿದೆ. ಇತ್ತ ಕೇಂದ್ರ ಸರ್ಕಾರ ಕೋವ್ಯಾಕ್ಸಿನ್ ಲಸಿಕೆಯ ಶೆಲ್ಫ್ ಲೈಫ್ ವಿಸ್ತರಣೆಗೆ ಅನುಮೋದನೆ ನೀಡಿ, ಬಳಕೆಯ ಅವಧಿಯನ್ನು 1 ವರ್ಷಕ್ಕೆ ಏರಿಕೆ ಮಾಡಿದೆ.

“ಕೋವ್ಯಾಕ್ಸಿನ್ ಲಸಿಕೆಯ ಬಳಕೆಯನ್ನು ಎರಡು ವರ್ಷದವರೆಗೆ ವಿಸ್ತರಣೆ ಮಾಡುವಂತೆ ಸಿಡಿಎಸ್‌ಸಿಒಗೆ ದಾಖಲೆಗಳನ್ನು ನೀಡಿದ್ದೆವು. ಆದರೆ ಸಿಡಿಎಸ್‌ಸಿಒ (ಕೇಂದ್ರಿಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ) ಒಂದು ವರ್ಷಕ್ಕೆ ವಿಸ್ತರಣೆ ಮಾಡಿ ಅನುಮೋದನೆ ನೀಡಿದೆ” ಎಂದು ಭಾರತ್ ಬಯೋಟೆಕ್ ಮಾಹಿತಿ ನೀಡಿದೆ.

ಈ ಮೊದಲು ಭಾರತ್ ಬಯೋಟೆಕ್ ಉತ್ಪಾದಿಸುವ ಕೋವಿಡ್ ಲಸಿಕೆ ಆರು ತಿಂಗಳು ಮಾತ್ರ ಶೆಲ್ಪ್ ಲೈಫ್ ಹೊಂದಿತ್ತು. ಈಗ ಸಿಡಿಎಸ್‌ಸಿಒ 12 ತಿಂಗಳವರೆಗೆ ವಿಸ್ತರಣೆ ಮಾಡಿ, ಅನುಮೋದನೆ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು