ಕೋವಿಡ್ ನ ಹೊಸ ತಳಿ ಒಮಿಕ್ರಾನ್ ಹಬ್ಬುವ ಭೀತಿ ಹೆಚ್ಚಿರುವ ವೇಳೆ ಭಾರತದ ಸೆರಂ ಇನ್ ಸ್ಟಿಟ್ಯೂಟ್ ತನ್ನ ಕೋವಿಶೀಲ್ಡ್ ಲಸಿಕೆಯ ಬೂಸ್ಟರ್ ಡೋಸ್ ಅನ್ನು ಅನುಮೋದಿಸುವಂತೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ಮನವಿ ಮಾಡಿದೆ.
ದೇಶದಲ್ಲಿರುವ ಲಸಿಕೆಯ ಹೆಚ್ಚಿನ ಪ್ರಮಾಣದ ದಾಸ್ತಾನಿನ ಬಗ್ಗೆ ಉಲ್ಲೇಖಿಸಿ ಸೆರಂ ಇನ್ ಸ್ಟಿಟ್ಯೂಟ್ ಬೂಸ್ಟರ್ ಡೋಸ್ ಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದೆ.
ಡಿಸಿಜಿಐ ಗೆ ಸೆರಂ ನ ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಮನವಿ ಮಾಡಿದ್ದು, ಯುಕೆಯ ಔಷಧಗಳು ಮತ್ತು ಆರೋಗ್ಯ ಆರೈಕೆ ಉತ್ಪನ್ನಗಳ ನಿಯಂತ್ರಣ ಸಂಸ್ಥೆ ಆಸ್ಟ್ರಜೆನೆಕಾ ಚಾಡೋಕ್ಸ್ 1 ಕೊರೋನಾ ಲಸಿಕೆಯ ಬೂಸ್ಟರ್ ಡೋಸ್ ಗೆ ಅನುಮತಿ ನೀಡಿದೆ.
ಇನ್ನು ಭಾರತದಲ್ಲಿ ಕೊರೋನಾ ಲಸಿಕೆ ಪಡೆದ ಜನರು ಬೂಸ್ಟರ್ ಡೋಸ್ ಗಾಗಿ ಬೇಡಿಕೆ ಇಟ್ಟಿದ್ದಾರೆ. ಹಾಗಾಗಿ ಕೋವಿಶೀಲ್ಡ್ ಬೂಸ್ಟರ್ ಡೋಸ್ ಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ಹಲವು ರಾಷ್ಟ್ರಗಳು ತನ್ನ ಜನರಿಗೆ ಕೋವಿಡ್ ಲಸಿಕೆಯ ಮೂರನೇ ಡೋಸ್ ಅನ್ನು ನೀಡುತ್ತಿವೆ ಎಂದು ತಿಳಿಸಿದ್ದಾರೆ.