News Karnataka Kannada
Friday, May 03 2024
ದೇಶ

ಕೇ0ದ್ರ ಸರ್ಕಾರವನ್ನು ಅಭಿನಂದಿಸಿದ ಸುಪ್ರೀಂ

Supreme Court 30 6 21
Photo Credit :

ನವದೆಹಲಿ: ಕೋವಿಡ್ ಸಾಂಕ್ರಾಮಿಕದಿಂದ ತಮ್ಮ ಆಪ್ತರನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿರುವ ಸಂತ್ರಸ್ಥರಿಗೆ ಪರಿಹಾರ ನೀಡಲು ಮುಂದಾದ ಕೇ0ದ್ರ ಸರ್ಕಾರವನ್ನು  ಸುಪ್ರೀಂ ಕೋರ್ಟ್  ಶ್ಲಾಘಿಸಿದೆ.

ಕೋವಿಡ್ ಸಾಂಕ್ರಾಮಿಕಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಮಾಡಿದ್ದನ್ನು ಬೇರೆ ಯಾವುದೇ ದೇಶವು ನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ಗುರುವಾರ ಸರ್ಕಾರದ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದೆ. ಅದೇ ವೇಳೆ ಕೊವಿಡ್-19 ಸಾವಿಗೆ ಪ್ರಸ್ತಾಪಿಸಿದ 50,000 ರೂ ಪರಿಹಾರ ಪ್ರಕರಣದ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಎಎಸ್ ಬೋಪಣ್ಣ ಅವರ ಪೀಠ, ‘ಇಂದು ನಾವು ತುಂಬಾ ಸಂತೋಷವಾಗಿದ್ದೇವೆ. ತೊಂದರೆ ಅನುಭವಿಸಿದ ವ್ಯಕ್ತಿಗಳಿಗೆ ಸ್ವಲ್ಪ ಸಾಂತ್ವನ ಸಿಗುತ್ತದೆ. ಸರ್ಕಾರ ನಡೆಸುತ್ತಿರುವ ಎಲ್ಲ ಕಾರ್ಯದ ಬಗ್ಗೆಯೂ ಖುಷಿಯಾಗಿದೆ. ಬಳಲುತ್ತಿರುವ ವ್ಯಕ್ತಿಯ ಕಣ್ಣೀರು ಒರೆಸಲು ಏನಾದರೂ ಮಾಡಲಾಗುತ್ತಿದೆ ಎಂದು ನಮಗೆ ಸಂತೋಷವಾಗಿದೆ ಎಂದು ಹೇಳಿತು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು