News Karnataka Kannada
Saturday, May 04 2024
ದೇಶ

ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದ ತ್ರಿಪುರಾದ ಮೊದಲ ನಿವಾಸಿ

Bhowmik Pratima 8 7 21
Photo Credit :

ಅಗರ್ತಲಾ, : ತ್ರಿಪುರಾ ರಾಜ್ಯದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ-ನಾಯಕರಲ್ಲಿ ಒಬ್ಬರಾದ ಪ್ರತಿಮಾ ಭೌಮಿಕ್‌ ಕೇಂದ್ರ ಸಚಿವರಾದ ಮೊದಲ ತ್ರಿಪುರ ನಿವಾಸಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

52 ವರ್ಷದ ಪ್ರತಿಮಾ ಭೌಮಿಕ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವೆಯಾಗಿದ್ದಾರೆ. ‘ಪ್ರತಿಮಾ ದಿ’ ಎಂದೇ ಪರಿಚಿತರಾಗಿರುವ ಭೌಮಿಕ್ ತ್ರಿಪುರಾ ರಾಜ್ಯದ ಬಿಜೆಪಿಯ ಹಿರಿಯ ನಾಯಕರು. ವಿಜ್ಞಾನ ಪದವೀಧರರಾದ ಭೌಮಿಕ್ 1991 ರಲ್ಲಿ ಪಕ್ಷಕ್ಕೆ ಸೇರಿದ್ದಾರೆ. ಅಂದಿನಿಂದ ರಾಜ್ಯದಲ್ಲಿ ಸಾಂಸ್ಥಿಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. 1998 ಮತ್ತು 2018 ರಲ್ಲಿ ತ್ರಿಪುರದಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ವಿರುದ್ಧ ಎರಡು ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದು ಎರಡು ಬಾರಿಯೂ ಪರಾಭವಗೊಂಡಿದ್ದಾರೆ. 2019 ರಲ್ಲಿ ತ್ರಿಪುರಾದಿಂದ ಮೊದಲ ಬಾರಿಗೆ ಸಂಸತ್ ಸದಸ್ಯರಾದರು. ಶಾಲಾ ಶಿಕ್ಷಕನ ಮಗಳಾದ ಭೌಮಿಕ್ ಸೋನಮುರಾದ ತನ್ನ ಸ್ಥಳೀಯ ಬಾರನಾರಾಯಣ್ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಹಾಗೆಯೇ ಖೋ-ಖೋ ಮತ್ತು ಕಬಡ್ಡಿ ಆಟಗಳಲ್ಲಿ ಬ್ಲಾಕ್, ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕೀರ್ತಿಯೂ ಭೌಮಿಕ್‌ಗೆ ಇದೆ.
ಈ ಹಿಂದೆ ಪಶ್ಚಿಮ ಬಂಗಾಳದವರಾಗಿದ್ದರೂ ರಾಜ್ಯಸಭೆಯಲ್ಲಿ ತ್ರಿಪುರವನ್ನು ಪ್ರತಿನಿಧಿಸಿದ ತ್ರಿಗುನ ಸೇನ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಂಪುಟದಲ್ಲಿ ಸಚಿವರಾಗಿದ್ದರು. ಅಸ್ಸಾಂ ನಿವಾಸಿ ಸಂತೋಷ್ ಮೋಹನ್ ದೇವ್ 1989 ರಲ್ಲಿ ಪಶ್ಚಿಮ ತ್ರಿಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಂಪುಟದಲ್ಲಿ ಸಚಿವರಾದರು. ಆದರೆ ಪ್ರತಿಮಾ ಭೌಮಿಕ್‌ ಕೇಂದ್ರ ಸಚಿವರಾದ ಮೊದಲ ತ್ರಿಪುರ ನಿವಾಸಿಯಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಅಸ್ಸಾಂನ ಬಿಜಯಾ ಚಕ್ರವರ್ತಿ ನಂತರ ಭೌಮಿಕ್ ಈಶಾನ್ಯದಿಂದ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಎರಡನೇ ಮಹಿಳೆಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು