ನವದೆಹಲಿ : ಕೊರೋನಾದಿಂದ ಗುಣಮುಖರಾಗಿರುವವರಿಗೆ ಕೋವ್ಯಾಕ್ಸಿನ್ನ ಒಂದು ಡೋಸ್ ಲಸಿಕೆ ಸಾಕಾಗಬಹದು ಎಂದು ಐಸಿಎಂಆರ್ ಅಧ್ಯಯನವೊಂದು ತಿಳಿಸಿದೆ.
ಈ ಹಿಂದೆ ಕೋವಿಡ್ -19 ಸೋಂಕಿತ ವ್ಯಕ್ತಿಗಳಲ್ಲಿ ಭಾರತ್ ಬಯೋಟೆಕ್ನ ಕೋವಾಕ್ಸಿನ್ನ ಒಂದು ಡೋಸ್ ಲಸಿಕೆಯು ಎರಡು ಡೋಸ್ಗಳಷ್ಟು ಪ್ರತಿಕಾಯ ಪ್ರತಿಕ್ರಿಯೆಯನ್ನು ಪಡೆಯುತ್ತದೆ. ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಪ್ರತಿರೋಧಕ ಶಕ್ತಿಯು ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತದೆ ಎಂದು ಐಸಿಎಂಆರ್ ಅಧ್ಯಯನ ತಿಳಿಸಿದ್ದು, ಈ ಅಧ್ಯಯನವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪತ್ರಿಕೆಯಲ್ಲಿ ಶನಿವಾರ ಪ್ರಕಟಿಸಲಾಗಿದೆ.
“ದೊಡ್ಡ ಜನಸಂಖ್ಯೆಯ ಅಧ್ಯಯನಗಳಲ್ಲಿ ನಮ್ಮ ಪ್ರಾಥಮಿಕ ಸಂಶೋಧನೆಗಳು ದೃಢಪಟ್ಟರೆ, ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ BBV152 ಲಸಿಕೆಯ ಒಂದು ಡೋಸ್ ಅನ್ನು ಶಿಫಾರಸು ಮಾಡಬಹುದು” ಎಂದು ಅಧ್ಯಯನ ಹೇಳಿದೆ.