News Karnataka Kannada
Friday, May 03 2024
ದೇಶ

ಉತ್ತರಾಖಂಡದ ಜೈಲುಗಳಲ್ಲಿ ಇನ್ನು ಮುಂದೆ ರೇಡಿಯೋ ಜಾಕಿಗಳ ಧ್ವನಿ

Jail 06092021
Photo Credit :

ಉತ್ತರಾಖಂಡ : ಉತ್ತರಾಖಂಡದ ಜೈಲುಗಳಲ್ಲಿ ಇನ್ನು ಮುಂದೆ ರೇಡಿಯೋ ಜಾಕಿಗಳ ಧ್ವನಿ ಕೇಳಲಿದ್ದು, ಸೆರೆಮನೆ ವಾಸದ ಬಳಿಕ ಹೊಸ ಜೀವನಕ್ಕೆ ಸಿದ್ಧವಾಗಲು ಅನುಕೂಲಕರ ವಾತಾವರಣ ಒದಗಿಸುವ ನಿಟ್ಟಿನಲ್ಲಿ ಈ ಹೊಸ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಕಾರಾಗೃಹದ ಐಜಿ ಅನ್ಶುಮಾನ್ ತಿಳಿಸಿದ್ದಾರೆ.

ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ಜಿಲ್ಲಾ ಕಾರಾಗೃಹ, ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಉಪ ಕಾರಾಗೃಹ ಮತ್ತು ಹರಿದ್ವಾರ ಜಿಲ್ಲಾ ಕಾರಾಗೃಹದಲ್ಲಿ ಮೊದಲ ಹಂತದ ರೇಡಿಯೋ ಕಾರ್ಯಕ್ರಮ ನಡೆಯಲಿದೆ. ಡೆಹ್ರಾಡೂನ್ ಜಿಲ್ಲಾ ಕಾರಾಗೃಹವು ಶೀಘ್ರದಲ್ಲೇ ತರಬೇತಿ ಪಡೆದ ಕೈದಿಗಳೊಂದಿಗೆ ರೇಡಿಯೋ ಕಾರ್ಯಕ್ರಮ ನಡೆಸಲಿದೆ.

ಕೈದಿಗಳಲ್ಲಿ ಒಟ್ಟು ಎಂಟು ಪುರುಷರು ಮತ್ತು ನಾಲ್ಕು ಮಹಿಳೆಯರನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ವೃತ್ತಿಪರರಿಂದ ತರಬೇತಿ ನೀಡಲಾಗುತ್ತಿದೆ ಎಂದು ಡೆಹ್ರಾಡೂನ್ ಜೈಲಿನ ಎಸ್ಪಿ ಪವನ್ ಕುಮಾರ್ ಕೊಠಾರಿ ಹೇಳಿದರು. ಜೈಲಿನಾದ್ಯಂತ ಸ್ಪೀಕರ್‌ಗಳನ್ನು ಅಳವಡಿಸಲಾಗಲಿದ್ದು, ಇದರಿಂದ ಕೈದಿಗಳಲ್ಲಿ ಧಾರ್ಮಿಕ ಬೋಧನೆಗಳು, ಸಂಗೀತ ಸೇರಿದಂತೆ ಇತರೆ ವಿಚಾರಗಳನ್ನು ಆಲಿಸಲು ಸಹಾಯವಾಗಲಿದೆ.

ಡೆಹ್ರಾಡೂನ್‌ನ ಜಿಲ್ಲಾ ಕಾರಾಗೃಹ ಸೇರಿದಂತೆ ಉತ್ತರಾಖಂಡದ ಹಲವು ಜೈಲುಗಳು 200% ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗ್ರಾ, ಫರಿದಾಬಾದ್, ಅಂಬಾಲಾ ಮತ್ತು ಪಾಣಿಪತ್ ಜೈಲುಗಳಲ್ಲಿ ಸ್ವಂತ ರೇಡಿಯೋ ನೆಟ್ವರ್ಕ್ ರಚಿಸಲು ಯೋಜನೆ ಸಿದ್ಧವಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು