News Karnataka Kannada
Friday, May 03 2024
ದೇಶ

ಇನ್ಮೇಲೆ ವಾಟ್ಸ್ಆಪ್’ನಲ್ಲೇ UBER ಕ್ಯಾಬ್ ಬುಕ್ ಮಾಡ್ಬೋದಂತೆ: ಹೊಸ ಫೀಚರ್ ಬಿಡುಗಡೆ

Uber
Photo Credit :

ಒಂದು ಜಾಗದಿಂದ ಮತ್ತೊಂದೆಡೆಗೆ ಪ್ರಯಾಣಿಸಲು ಸಾಧ್ಯವಾಗುವ ಊಬರ್, ಇನ್ಮುಂದೆ ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ. ಕೇವಲ ಊಬರ್ ಮೊಬೈಲ್ ಆಪ್ ನಲ್ಲಿ ಕ್ಯಾಬ್ ಬುಕ್ ಮಾಡಬೇಕಿತ್ತು. ಆದರೆ ಈಗ ಊಬರ್ ವಾಟ್ಸ್ ಗೆ ಎಂಟ್ರಿ ಕೊಟ್ಟಿದೆ.
ಭಾರತದ ಲಕನೌನಲ್ಲಿ ಇದರ ಮೊದಲ ಸೇವೆ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ದೇಶವ್ಯಾಪಿ ವಿಸ್ತರಿಸಲಾಗುತ್ತದೆ.

ಹೇಗೆ ವರ್ಕ್ ಆಗುತ್ತೆ?

  • ವಾಟ್ಸ್ ಆಪ್ ನಿಂದ ಊಬರ್ ನ ಬ್ಯುಸಿನೆಸ್ ನಂಬರ್ ಗೆ ಮೆಸೇಜ್ ಮಾಡುವ ಮೂಲಕ ಕ್ಯಾಬ್ ಬುಕ್ ಆಗಲಿದೆ.
  • ವಾಟ್ಸ್ ಆಪ್ ಮೂಲಕವೇ ಜನರು ಊಬರ್ ನೋಂದಣಿ ಮಾಡಿಕೊಂಡು, ಕ್ಯಾಬ್ ಬುಕ್ ಮಾಡಬಹುದು. ಜತೆಗೆ ರಸೀದಿಯನ್ನು ಪಡೆಯಬಹುದಾಗಿದೆ.
  • ಇದರಲ್ಲೇ ನಿಮಗೆ ಪ್ರಯಾಣದ ದರ, ಡ್ರೈವರ್ ಬರುವ ಸಮಯವೂ ಮುಂಚಿತವಾಗಿಯೇ ತೋರಿಸುತ್ತದೆ.
  • ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಜನರಿಗೆ ಅಗತ್ಯವಿರುವ ಕ್ಯಾಬ್ ನ ಸಂಖ್ಯೆ, ಚಾಲಕನ ಲೈಸೆನ್ಸ್, ಹೆಸರು ಕೂಡ ತಿಳಿಯಬಹುದಾಗಿದೆ.
  • ಇಲ್ಲಿ ಪ್ರಯಾಣಿಕರಿಗೆ ಬೇಕಾದ ತುರ್ತು ಸಹಾಯವಾಣಿ ಸಂಖ್ಯೆಯನ್ನು ನೀಡಲಾಗುತ್ತದೆ. ಸದ್ಯ ಈ ಹೊಸ ಫೀಚರ್ ಇಂಗ್ಲಿಷ್ ನಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇತರೆ ರಾಜ್ಯ ಹಾಗೂ ಭಾಷೆಗಳಲ್ಲಿಯೂ ಸಿಗಲಿದೆ ಎಂದು ಸಂಸ್ಥೆ ತಿಳಿಸಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು