ಪೆಟ್ರೋಲಿಗೆ ಎಥೆನಾಲ್ ಬೆರೆಸುವ ಕ್ರಮದಿಂದ ಭಾರತ ದೊಡ್ಡಮಟ್ಟದಲ್ಲಿ ವಿದೇಶಿ ವಿನಿಮಯವನ್ನು ಉಳಿಸಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್ ನಲ್ಲಿ ಎಥನಾಲ್ ಬಳಸುತ್ತಿರುವುದರಿಂದ (Ethanol Blended Petrol – ಇಬಿಪಿ) ಭಾರತ ಬರೋಬ್ಬರಿ 9,580 ಕೋಟಿ ರೂ. ಉಳಿತಾಯ ಮಾಡಿಕೊಂಡಿದೆ.
ಇಬಿಪಿ ಯೋಜನೆ ಅಡಿಯಲ್ಲಿ ದೇಶದಲ್ಲಿನ ತೈಲ ಮಾರುಕಟ್ಟೆ ಕಂಪನಿಗಳಲ್ಲಿ ಶೇ. 10ರಷ್ಟು ಇಂಧನ ಎಥನಾಲ್ ಮಿಶ್ರಿತವಾಗಿರುತ್ತದೆ.
ಈ ಬಗ್ಗೆ ಸಂಸತ್ತಿನಲ್ಲಿ ಮಾಹಿತಿ ನೀಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ್ ತೇಲಿ, ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಮ್, ಹಿಂದುಸ್ತಾನ್ ಪೆಟ್ರೋಲಿಯಂ ಕಂಪನಿಗಳು ಡಿ.1 2020 ರಿಂದ ನ.14 2021ರವರೆಗೆ 3,672 ಕೋಟಿ ಲೀಟರ್ ಎಥನಾಲ್ ಮಿಶ್ರಿತ ಪೆಟ್ರೋಲ್ ಮಾರಾಟ ಮಾಡಿವೆ. ಇದರಿಂದ ವಿದೇಶಿ ವಿನಿಮಯಕ್ಕೆ ನೀಡಬೇಕಿದ್ದ ಸುಮಾರು 9,580 ಕೋಟಿ ರೂ. ಉಳಿಸಲಾಗಿದೆ ಎಂದಿದ್ದಾರೆ.