News Karnataka Kannada
Thursday, May 02 2024
ದೇಶ

ಅಕ್ರಮವಾಗಿ ನಿರ್ಮಾಣವಾದ ಅವಳಿ ಗೋಪುರ ಕೆಡವಲು ಸುಪ್ರೀಂ ಆದೇಶ

Supreem Mai Newsk 3834246588
Photo Credit :
ನವದೆಹಲಿ : ಅಕ್ರಮವಾಗಿ ನಿರ್ಮಿಸಲಾದ  ಆರೋಪದ  ಉತ್ತರ ಪ್ರದೇಶದ ನೋಯ್ಡಾದ ಅವಳಿ ಗೋಪುರ ಕಟ್ಟಡವನ್ನು ಕೆಡವಲು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ನೀಡಿದೆ.
ನಿಬಂಧನೆಗಳನ್ನು ಉಲ್ಲಂಘಿಸಿ ಅಕ್ರಮವಾಗಿ , ಸೂಪರ್‌ ಟೆಕ್ ಎಮರಾಲ್ಡ್ ಸಂಸ್ಥೆ 40 ಅಂತಸ್ತಿನ 2 ಟವರ್‌ ಗಳನ್ನು ನಿರ್ಮಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿಬಂಧನೆಗಳಿಗೆ ವಿರುದ್ದವಾಗಿ ನಿರ್ಮಿಸುತ್ತಿರುವ ಅವಳಿ ಗೋಪುರಗಳನ್ನು ಕೆಡವಲು ಆದೇಶಿಸಿದೆ. ಮೂರು ತಿಂಗಳಲ್ಲಿ ಕೆಡವುವ ಪ್ರಕ್ರಿಯೆ ಪೂರ್ಣಗೊಳಿಸಬೇಕು, ಕೆಡವಲು ತಗಲುವ ವೆಚ್ಚವನ್ನು ಸೂಪರ್-ಟೆಕ್ ಸಂಸ್ಥೆಯಿಂದ ವಸೂಲಿ ಮಾಡಬೇಕು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಲಾಗಿದೆ.
ಅಲ್ಲದೆ ಈ ವಿವಾದಿತ ಕಟ್ಟಡದಲ್ಲಿ ನಿವೇಶನ ಖರೀದಿಸಿದ ಜನರಿಗೂ ಸುಪ್ರೀಂ ಕೋರ್ಟ್ ಪರಿಹಾರ ನೀಡುವಂತೆ ಆದೇಶಿಸಿದ್ದು, ಇಲ್ಲಿ ಪ್ಲಾಟ್‌ ಗಳನ್ನು ಖರೀದಿಸಿದ ಎಲ್ಲರಿಗೂ ಶೇ.12 ರ ಬಡ್ಡಿಯೊಂದಿಗೆ ಹಣ ಮರುಪಾವತಿಸುವಂತೆ ಆದೇಶಿಸಿದೆ. ಮೂಲಗಳ ಪ್ರಕಾರ ಈ ಎರಡು ಅವಳಿ ಗೋಪುರಗಳಲ್ಲಿ ಸುಮಾರು ಒಂದು ಸಾವಿರ ಪ್ಲಾಟ್‌ ಗಳಿವೆ ಎನ್ನಲಾಗಿದೆ.
ಇದೇ ವೇಳೆ ಅಕ್ರಮವಾಗಿ ಕಟ್ಟಡ ಕಟ್ಟಲು ಅನುವು ಮಾಡಿಕೊಟ್ಟ ನೋಯ್ಡಾ ಪ್ರಾಧಿಕಾರದ ಮೇಲೂ ಸುಪ್ರೀಂ ಕೋರ್ಟ್ ಚಾಟಿ ಬೀಸಿದ್ದು, ‘ನೋಯ್ಡಾ ಪ್ರಾಧಿಕಾರ ಮತ್ತು ರಿಯಲ್ ಎಸ್ಟೇಟ್ ಕಂಪನಿ, ಸೂಪರ್‌ಟೆಕ್‌ ನಡುವೆ ಒಳಸಂಚು ನಡೆದಿದ್ದು, ನೋಯ್ಡಾ ಪ್ರಾಜೆಕ್ಟ್ ಒಂದರಲ್ಲಿ ಎರಡು ಹೆಚ್ಚುವರಿ ಟವರ್‌ಗಳ ನಿರ್ಮಾಣವನ್ನು ಅನುಮತಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು