ದೇಶದ ಕೆಲವು ಕಡೆಗಳಲ್ಲಿ ಭಾರೀ ಮಳೆ ಮುಂದುವರೆದಿದ್ದು, ಅಕ್ಟೋಬರ್ 1 ರಿಂದ 21ರವರೆಗಿನ ಅವಧಿಯಲ್ಲಿ ದೇಶಾದ್ಯಂತ ವಾಡಿಕೆಗಿಂತ ಶೇ. 41ರಷ್ಟು ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉತ್ತರಾಖಂಡದಲ್ಲಿ ವಾಡಿಕೆಯ 35.3 ಮೀ.ಮೀ. ಬದಲಾಗಿ 195 ಮಿ.ಮೀ. ಮಳೆಯಾಗಿದೆ. ದೇಶದ ಒಟ್ಟು 694 ಜಿಲ್ಲೆಗಳ ಪೈಕಿ 311 ಜಿಲ್ಲೆಗಳಲ್ಲಿ (ಶೇ. 45) ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ.
ಕೇರಳದಲ್ಲೂ ಭಾರೀ ಮಳೆಯಾಗುತ್ತಿದ್ದು, ಅಕ್ಟೋಬರ್ 20ರವರೆಗೆ ಸಾಮಾನ್ಯವಾಗಿ 303.4 ಮೀ.ಮೀ. ವಾಡಿಕೆಯ ಮಳೆ ಬದಲು 445.1 ಮೀ.ಮೀ ಸುರಿದಿದೆ.
ದೇಶದಲ್ಲಿ ಸಾಮಾನ್ಯವಾಗಿ ಸೆಪ್ಟೆಂಬರ್ ಮಧ್ಯದಿಂದ ಮುಂಗಾರು ಅಂತ್ಯ ಆರಂಭವಾಗಬೇಕು. ಆದರೆ ಈ ವರ್ಷ ವಾಯುಭಾರ ಕುಸಿತ ಸೇರಿದಂತೆ ಹಲವು ಕಾರಣಗಳಿಂದ ಅಕ್ಟೋಬರ್ ನಲ್ಲಿಯೂ ಭಾರೀ ಮಳೆಯಾಗುತ್ತಿದೆ.