News Karnataka Kannada
Friday, May 03 2024
ವಿದೇಶ

ಚೀನಾಗೆ ಅಪ್ಪಳಿಸಿದ ಡೊಕ್ಸುರಿ ಸೈಕ್ಲೋನ್: 30ಕ್ಕೂ ಹೆಚ್ಚು ಜನರು ಬಲಿ

china-doksuri
Photo Credit :

ಚೀನಾ: ಮಳೆಯ ಅವಾಂತರಕ್ಕೆ ಚೀನಾ ನಳುಗಿ ಹೋಗಿದೆ. ವರುಣ ದೇವ ತನ್ನ ಮಳೆಯ ಮೃದಂಗ ಭಾರಿಸುತ್ತಾ, ಚೀನೀಯ ಜನ ಜೀವವನ್ನ ಅಸ್ತವ್ಯಸ್ತಮಾಡಿದ್ದಾನೆ. ಕಳೆದ ಒಂದೇ ದಿನ ಚೀನಾದ ರಾಜಧಾನಿ ಬೀಜಿಂಗ್​​ಗೆ ಭಾರೀ ಡೊಕ್ಸುರಿ ಚಂಡಮಾರುತವು ಅಪ್ಪಳಿಸಿದೆ. ಚಂಡಮಾರುತ ಅಪ್ಪಳಿಸಿದ ಪರಿಣಾಮ ಭಾರೀ ಮಳೆಯಾಗುತ್ತಿದ್ದು, ಡ್ರ್ಯಾಗನ್ ದೇಶ ತತ್ತರಿಸಿ ಹೋಗಿದೆ.

ಫಿಲಿಪೈನ್ಸ್​​ಗೆ ಅಪ್ಪಳಿಸಿದ್ದ ಡೊಕ್ಸುರಿ ಸೈಕ್ಲೋನ್ ಚೀನಾದಲ್ಲೂ 30ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಇದೀಗ ಉತ್ತರ ಚೀನಾದ ರಾಜಧಾನಿ ಬೀಜಿಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಭೂಕುಸಿತ ಪ್ರಕರಣಗಳು ಅಜಾನುಭಾಹು ಬರ ಸಿಡಿಲಿನ ವೇಗಕ್ಕೆ ಬೀಜಿಂಗ್ ಹೊರತುಪಡಿಸಿ ಹೆಬೈ ರಾಜಧಾನಿ ಶಿಜಿಯಾಜುವಾಂಗ್‌ನ ಭಾಗಗಳಿಂದ 20,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಚೀನಾ ದೇಶದ ಸರ್ಕಾರ ತಿಳಿಸಿದೆ.

ಚೀನಾದ ಹವಾಮಾನ ಇಲಾಖೆ ಅಧಿಕಾರಿಗಳು ಖಾನುನ್ ಎಂಬ ಹೆಸರಿನ ಮತ್ತೊಂದು ಚಂಡಮಾರುತದ ಸಮೀಪಿಸುವಿಕೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇದು ಶೀಘ್ರವಾಗಿ ಬಲವನ್ನು ಪಡೆದುಕೊಳ್ಳುತ್ತದೆ ಮತ್ತು ಮುಂದಿನ ವಾರ ಚೀನಾದ ಜನನಿಬಿಡ ಕರಾವಳಿಯನ್ನು ಅಪ್ಪಳಿಸುತ್ತದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು