News Karnataka Kannada
Friday, May 03 2024
ವಿದೇಶ

ವೈರಲ್ ಫೋಟೋ: ಬಾರ್ಬಿ ಬಣ್ಣದಲ್ಲಿ ಬರಾಕ್​ ಒಬಾಮಾ ಮತ್ತು ಜೋ ಬೈಡನ್

barbie-fever
Photo Credit : Twitter

ಬಾರ್ಬಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಶ್ವದಾದ್ಯಂತ ಬಾರ್ಬಿ ಸಿನಿಮಾ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜುಲೈ 21ರಂದು ಬಾರ್ಬಿ ಸಿನಿಮಾ ರಿಲೀಸ್ ಆಗಿದೆ. ‘ಬಾರ್ಬಿ’ ಸಿನಿಮಾದಲ್ಲಿ ಜನಪ್ರಿಯ ಗೊಂಬೆ ಬಾರ್ಬಿಯ ಫ್ಯಾಂಟಸಿ ಕತೆಯನ್ನು ಒಳಗೊಂಡಿದ್ದು, ಒಂದೊಮ್ಮೆ ಬಾರ್ಬಿ ತನ್ನ ಬೊಂಬೆಗಳ ಲೋಕದಿಂದ ಭೂಮಿಗೆ ಬಂದರೆ ಏನಾಗಬಹುದು ಎಂಬ ಕತೆಯನ್ನು ಇರಿಸಿಕೊಂಡು ಸಿನಿಮಾ ಮಾಡಲಾಗಿದೆ.

ಬಳಿಕ ಜುಲೈ 21 ರಂದು ಬಿಡುಗಡೆಯಾದ ಬಾರ್ಬಿ ಇಡೀ ಜಗತ್ತನ್ನು ಗುಲಾಬಿ ಜ್ವರಕ್ಕೆ ಕೆಡವಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಪಿಂಕ್ ಗೂಗಲ್, ಪಿಂಕ್ ಎಆರ್‌ಬಿಎನ್‌ಬಿ, ಪಿಂಕ್​ ಬರ್ಗರ್​ ಹೀಗೆ… ಇದೀಗ ಜೋ ಬೈಡನ್ ಮತ್ತು ಒಬಾಮಾ ಅವರ ಬಾರ್ಬಿ ಎಐ ಚಿತ್ರವನ್ನು ಬೈಡೆನ್ ಆಡಳಿತದಲ್ಲಿ ರಾಷ್ಟ್ರೀಯ ಹಣಕಾಸು ಅಧ್ಯಕ್ಷರಾಗಿದ್ದ ಜಾನ್​ ಕೂಪರ್​ ಟ್ವೀಟ್​ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ಅನೇಕರು ಈ ಟ್ವೀಟಿನಡಿ ಪ್ರತಿಕ್ರಿಯಿಸುತ್ತಿದ್ದಾರೆ. ನಕ್ಕು ನಕ್ಕು ಹೊಟ್ಟೆ ಕರಗಿಸಿಕೊಳ್ಳಲು ಇದಕ್ಕಿಂತ ಒಳ್ಳೆಯ ಚಿತ್ರ ಬೇಕೇ? ಎಂದಿದ್ದಾರೆ ಒಬ್ಬರು. ಇದು ಅದ್ಭುತ, ಇದು ನಿಜವಾಗಲಿ ಎಂದಿದ್ದಾರೆ ಇನ್ನೊಬ್ಬರು. ಆದರೆ ಎಐ ಕಲಾವಿದರ ಈ ಸರಣಿಚಿತ್ರಗಳ ಕುರಿತು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಬಾರ್ಬಿ ಹೆಸರಿನಲ್ಲಿ ಇಂಥವರನ್ನೆಲ್ಲ ನೋಡುತ್ತಿರುವುದು ನಿರಾಶೆ ಉಂಟು ಮಾಡುತ್ತಿದೆ. ನಿಜಕ್ಕೂ ಶೋಚನೀಯ ಎಂದಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು