ಜಪಾನ್: ಜಪಾನ್ನಲ್ಲಿ ಏವಿಯನ್ ಫ್ಲೂ ಕಾಣಿಸಿಕೊಂಡ ಹಿನ್ನೆಲೆ 14 ಸಾವಿರ ಪಕ್ಷಿಗಳನ್ನು ಕೊಲ್ಲಲಾಗಿದೆ ಎಂದು ಮಾಹಿತಿ ಲಭಿಸಿದೆ.
ಕಾಗೋಶಿಮಾದ ಮಿನಾಮಿಸಾತ್ಸುಮಾ ನಗರದ ಕೋಳಿ ಫಾರ್ಮ್ನಲ್ಲಿ ಏವಿಯನ್ ಇನ್ಫ್ಲುಯೆಂಜಾ ಕಾಣಿಸಿಕೊಂಡಿದೆ. ಈ ಫ್ಲೂ ಕಾಣಿಸಿಕೊಂಡಂತೆ ಹತ್ತಿರದ ಫಾರ್ಮ್ನಲ್ಲಿರುವ ಕೋಳಿಗಳನ್ನು ಸಹ ಕೊಲ್ಲಲಾಗಿದೆ. ಇದರ ಜೊತೆಗೆ ಈ ರೋಗ ಹರಡದಂತೆ ಪಕ್ಷಿಗಳನ್ನು ಸಹ ಕೊಲ್ಲಲಾಗಿದೆ. ಸದ್ಯ ಜಪಾನ್ನಲ್ಲಿ ಸೋಂಕು ಹರಡದಂತೆ ಅಲ್ಲಿನ ಸರ್ಕಾರ ಕಟ್ಟೆಚ್ಚರ ವಹಿಸಿದೆ ಎಂದು ತಿಳಿದುಬಂದಿದೆ.