ಅಫ್ಘಾನಿಸ್ಥಾನ : ತಾಲಿಬಾನ್ ಮತ್ತು ಪಂಜ್ಶೀರ್ ಯೋಧರ ನಡುವಿನ ಕದನ ಮುಂದುವರೆದಿದ್ದು, ಈವರೆಗೆ 700ಕ್ಕೂ ಹೆಚ್ಚು ತಾಲಿಬಾನಿಗಳನ್ನು ಹತ್ಯೆ ಮಾಡಿರುವುದಾಗಿ ಪ್ರತಿರೋಧ ಪಡೆ ಹೇಳಿಕೊಂಡಿದೆ. “ನಮ್ಮನ್ನು ನಾಶಪಡಿಸಲು ಬಂದ 700ಕ್ಕೂ ಹೆಚ್ಚು ತಾಲಿಬಾನ್ ಉಗ್ರರನ್ನು ಹತ್ಯೆಗೈಯಲಾಗಿದೆ. ಸಾವಿರಕ್ಕೂ ಅಧಿಕ ಉಗ್ರರು ಪ್ರತಿರೋಧ ಪಡೆಯ ವಶದಲ್ಲಿದ್ದಾರೆ” ಎಂದು ಪಂಜ್ಶೀರ್ ಪಡೆಯ ವಕ್ತಾರ ಫಾಹಿಮ್ ದಶ್ಟಿ ತಿಳಿಸಿದ್ದಾರೆ.
ದಿನೇ ದಿನೇ ತಾಲಿಬಾನ್ ಗಳು ಪಂಜ್ಶೀರ್ ಕಣಿವೆಯ ವಶಪಡಿಸಿಕೊಳ್ಳಲು ತಂಣತ್ರಗಳನ್ನು ಹೆಣೆಯುತ್ತಿದ್ದು, ಅದಕ್ಕೆ ಪ್ರತಿರೋಧ ಪಡೆಯು ಪ್ರತಿತಂತ್ರದ ಮೂಲಕ ಹಿಮ್ಮೆಟ್ಟಿಸುತ್ತಿದೆ. ಹೀಗಾಗಿ ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯಕ್ಕೆ ಸರಕು ಸಾಗಣೆ ಮಾಡಲು ತಾಲಿಬಾನ್ ಉಗ್ರ ಸಂಘಟನೆಗೆ ಆಗುತ್ತಿಲ್ಲ ಎಂದು ಕೆಲವು ಸುದ್ದಿ ಸಂಸ್ಥೆಗಳ ವರದಿ ತಿಳಿಸಿದೆ.
ಆ.31ರಂದು ಇಡೀ ಅಮೆರಿಕ ಸೇನೆಯನ್ನು ವಾಪಸ್ ಕಳುಹಿಸಿದ ಬಳಿಕ ಇಡೀ ಅಫ್ಘಾನಿಸ್ಥಾನವನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದುಕೊಂಡಿದೆ. ಪಂಜ್ಶೀರ್ ಗಾಗಿ ತಾಲಿಬಾನ್ ಹೋರಾಟ ನಡೆಸುತ್ತಿದ್ದು, ಪ್ರಾಂತ್ಯದ ಏಳು ಜಿಲ್ಲೆಗಳಲ್ಲಿ ನಾಲ್ಕು ಜಿಲ್ಲೆ ತಾಲಿಬಾನ್ ಪಡೆಗಳ ನಿಯಂತ್ರಣದಲ್ಲಿದೆ ತರಲಾಗಿದೆ ಎಂದು ತಾಲಿಬಾನ್ ವಕ್ತಾರ ಬಿಲಾಲ್ ಕರಿಮಿ ತಿಳಿಸಿದ್ದಾರೆ.