ತೆಹ್ರಾನ್ : ಏಕಕಾಲದಲ್ಲಿ ಎರಡು ಸ್ಫೋಟ ಸಂಭವಿಸಿದ್ದು, ಕನಿಷ್ಠ 70 ಜನರು ಮೃತಪಟ್ಟಿದ್ದು, 170 ಮಂದಿ ಗಾಯಗೊಂಡಿರುವ ಘಟನೆ ಆಗ್ನೇಯ ನಗರವಾದ ಕೆರ್ಮನ್ನಲ್ಲಿರುವ ಇರಾನ್ ಜನರಲ್ ಖಾಸೆಮ್ ಸುಲೇಮಾನಿ ಅವರ ಸಮಾಧಿ ಬಳಿ ನಡೆದಿದೆ. ಯುಎಸ್ ಡ್ರೋನ್ ದಾಳಿಯಲ್ಲಿ ದೇಶದ ಉನ್ನತ ಕಮಾಂಡರ್ ಖಾಸೆಮ್ ಅವರ ಪುಣ್ಯ ಸ್ಮರಣೆ ಆಚರಿಸಲು ಜನರು ಸಮಾರಂಭವನ್ನು ನಡೆಸುತ್ತಿದ್ದಾಗ ಈ ಸ್ಪೋಟ ಸಂಭವಿಸಿದೆ.
ಸ್ಮಶಾನಕ್ಕೆ ಹೋಗುವ ರಸ್ತೆಯಲ್ಲಿ ಹಲವಾರು ಗ್ಯಾಸ್ ಕ್ಯಾನಿಸ್ಟರ್ಗಳು ಸ್ಫೋಟಗೊಂಡಿವೆ ಎಂದು ಎನ್ನಲಾಗಿದೆ.
ಸ್ಫೋಟಗಳು ಗ್ಯಾಸ್ ಸಿಲಿಂಡರ್ಗಳಿಂದ ಸಂಭವಿಸಿವೆಯೇ ಅಥವಾ ಭಯೋತ್ಪಾದಕ ದಾಳಿಯಿಂದ ಉಂಟಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.