ಟೆಹರಾನ್: ಸ್ಟೋಟಗೊಳ್ಳದೇ ಹಾಗೆ ಉಳಿದಿದ್ದ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ವೇಳೆ ಸಂಭವಿಸಿದ ಸ್ಟೋಟದಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ 14 ಸದಸ್ಯರು ಮೃತಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮಗಳು ಶುಕ್ರವಾರ ವರದಿ ಮಾಡಿದೆ.
ಟೆಹರಾನ್‌ನ ವಾಯವ್ಯ ಭಾಗದಲ್ಲಿರುವ ಉತ್ತರ ನಗರ ಝಂಜಾನ್ ಬಳಿ ಈ ಸ್ಫೋಟ ಸಂಭವಿಸಿದೆ. ಯುದ್ಧದ ಸಮಯದಲ್ಲಿ ಹಾಕಲಾಗಿದ್ದ ಕ್ಲಸ್ಟರ್ ಬಾಂಬ್‌ಗಳು ಸ್ಟೋಟಗೊಂಡು ಹಲವರ ಸಾವಿಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಫೆ.28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವೈಮಾನಿಕ ದಾಳಿ ಮಾಡಿದ್ದವು. ಇದಕ್ಕೆ ಪ್ರತೀಕಾರವಾಗಿ ಕೊಲ್ಲಿ ರಾಷ್ಟ್ರಗಳ ಅಮೆರಿಕ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿತ್ತು. ಯುದ್ಧದಿಂದ ಇಸ್ರೇಲ್ ಮತ್ತು ಇರಾನ್‌ನಲ್ಲಿ ಅಪಾರ ಹಾನಿಯಾಗಿದೆ.
ಹೊರ್ಮುಜ್ ಜಲಸಂಧಿಯನ್ನು ನಿಯಂತ್ರಿಸುವ ಮೂಲಕ ಇರಾನ್ ಯುದ್ಧವನ್ನು ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋಗಿತ್ತು. ಇರಾನ್‌ನ ಈ ನಡೆಯು ಜಾಗತಿಕ ಆರ್ಥಿಕತೆ ಮೇಲೆ ತೀವ್ರ ಪರಿಣಾಮವನ್ನೂ ಬೀರಿತ್ತು.

