ಉಡುಪಿ: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ, ಕಾರ್ಮಿಕ ಘಟಕದ ವತಿಯಿಂದ ಕಾರ್ಮಿಕ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಶುಕ್ರವಾರ ನಡೆಯಿತು.
ಉಡುಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಜೆಡಿಎಸ್ ಜಿಲ್ಲಾದ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ತುಳು ನಾಡು ನುಡಿಗಾಗಿ ತುಳುನಾಡ ರಕ್ಷಣಾ ವೇದಿಕೆ ಹಲವಾರು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದೆ. ಈ ಸಂಘಟನೆಯ ಹೋರಾಟ, ಕಾರ್ಯಕ್ರಮಗಳು ಶ್ಲಾಘನೀಯವಾಗಿದೆ. ಆದಷ್ಟು ಬೇಗ ತುಳು ಬಾಷೆ ಎಂಟನೇ ಪರಿಚ್ಚೇದಕ್ಕೆ ಸೇರಬೇಕು ರಾಜ್ಯದ ಎರಡನೇ ಪ್ರಮುಖ ಬಾಷೆಯಾಗಿ ಮಾನ್ಯತೆ ಸಿಗಬೇಕು ಎಂದರು.
ಇದೇ ಸಂದರ್ಬದಲ್ಲಿ ಕಟ್ಟಡ ಕಾರ್ಮಿಕರಾದ ರಮೇಶ್, ನಾಗೇಶ್ ಹಾಗೂ ರಿಕ್ಷಾ ಚಾಲಕರಾದ ರತ್ನಾಕರ ನಾಯಕ್ ಇವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಮುಂಬೈನ ಉದ್ಯಮಿಯಾಗಿರುವ ಅಜಿತ್ ಶೆಟ್ಟಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸಂಘಟನೆಯ ವತಿಯಿಂದ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕುಂದಾಪುರದ ಕಾರ್ಮಿಕ ಅಧೀಕ್ಷಕ ವಿಜಯೇಂದ್ರ ಕೆ. ಅವರು ಕಾರ್ಮಿಕರಿಗೆ ಸಿಗುವ ಸವಲತ್ತಿನ ಬಗೆಗೆ ಮಾಹಿತಿ ನೀಡಿದರು. ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅದ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದರು. ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾದ್ಯಕ್ಷ ಪ್ರ್ಯಾಂಕಿ ಡಿಸೋಜಾ ಕೊಳಲಗಿರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಘಟಕದ ಅದ್ಯಕ್ಷ ಜಯಪೂಜಾರಿ, ಚೇಂಬರ್ ಆಫ್ ಕಾರ್ಮರ್ಸ್ , ಪೌಂಡೇಶನ್ ಆಫ್ ಕರ್ನಾಟಕದ ಸದಸ್ಯ ಸುಶಾಂತ್ ಬ್ರಹ್ಮಾವರ , ಸಂತೋಶ್ ಎಂ ಶೆಟ್ಟಿಗಾರ್ , ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ, ಕಾರ್ಮಿಕ ಘಟಕದ ಪ್ರದಾನ ಕಾರ್ಯದರ್ಶಿ ಅವಿನಾಶ್ ಶೆಟ್ಟಿ, ಕಾಪು ಮಹಿಳಾ ಘಟಕದ ಅದ್ಯಕ್ಷೆ ಅನಸೂಯ ಶೆಟ್ಟಿ, ಕಾಪು ಘಟಕದ ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ , ಕೃಷ್ಣಾನಂದ ನಾಯಕ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

