News Karnataka Kannada
Saturday, May 11 2024
ವಿದೇಶ

1 ಗಂಟೆ 25 ನಿಮಿಷ ಅಮೆರಿಕ ಅಧ್ಯಕ್ಷೆ ಹುದ್ದೆ ಅಲಂಕರಿಸಿದ್ದ ಕಮಲಾ ಹ್ಯಾರಿಸ್

Kamal Harris
Photo Credit :

ಭಾರತ ಮೂಲದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಅಲ್ವ ಸಮಯದ ಅಮೆರಿಕದ ಅಧ್ಯಕ್ಷೆಯಾಗಿ ಅಧಿಕಾರ ಚಲಾಯಿಸಲಿದ್ದು, ಈ ಮೂಲಕ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬಿಡನ್‌  ಅವರು  ಶ್ವೇತಭವನದ ವೈದ್ಯರಿಂದ ವಾರ್ಷಿಕ ಸಮಗ್ರ ಆರೋಗ್ಯ ತಪಾಸಣೆಗೆ ಒಳಗಾಗಿದ್ದು, ಈ ಸಮಯದಲ್ಲಿ ಅವರ ಅಧಿಕಾರವನ್ನು ಕಮಲಾ ಹ್ಯಾರಿಸ್‌ ಅವರಿಗೆ ವರ್ಗಾಯಿಸಲಾಯಿತು.

ಕಮಲಾ ಹ್ಯಾರಿಸ್ ಅವರು ಶ್ವೇತಭವನದ ಪೂರ್ವ ಭಾಗದಲ್ಲಿರುವ ತಮ್ಮ ಕಚೇರಿಯಿಂದಲೇ  1 ಗಂಟೆ 25 ನಿಮಿಷ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಬಿಡನ್‌ ಅವರ ಆರೋಗ್ಯದ ಬಗ್ಗೆ ಶ್ವೇತಭವನದ ವೈದ್ಯ ಕೆವಿನ್ ಒ’ಕೊನ್ನೊರ್ ಮಾಹಿತಿ ನೀಡಿದ್ದು, 79 ವರ್ಷದ ಜೋ ಬಿಡನ್ ಅವರು ಆರೋಗ್ಯಯುತವಾಗಿದ್ದಾರೆ.  ಯಾವುದೇ ಗಂಭೀರ ಸಮಸ್ಯೆ ಇಲ್ಲ.‌ ಒಂದು ವರ್ಷದ  ಹಿಂದೆ ಬಿಡನ್‌ ಅವರಿಗೆ  ನಡೆಯುವಾಗ ಕಾಲಿಗೆ ಪೆಟ್ಟು ಬಿದ್ದು ಸಮಸ್ಯೆಯಾಗಿತ್ತು ಮತ್ತು ಗಂಟಲಿನ ಸಮಸ್ಯೆ ಕೂಡ ಎದುರಿಸುತ್ತಿದ್ದಾರೆ ಸಾರ್ವಜನಿಕ ಸಭೆ-ಕಾರ್ಯಕ್ರಮಗಳಲ್ಲಿ ಮಾತನಾಡುವಾಗ ಕೆಮ್ಮು ಬರುತ್ತದೆ. ಇದು ಗಂಭೀರ ಸಮಸ್ಯೆ ಏನಲ್ಲ ಎಂದು ತಿಳಿಸಿದ್ದಾರೆ.

2002 ಹಾಗೂ 2007ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು ಬುಶ್ ಕೂಡ ಕೊಲನೋಸ್ಕೋಪಿ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ಅಧಿಕಾರವನ್ನು ಉಪಾಧ್ಯಕ್ಷರಿಗೆ ಹಸ್ತಾಂತರಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು