ಸೊಪೊರೆ(ಶ್ರೀನಗರ): ಬಾರಮುಲ್ಲಾದ ಸೊಪೊರೆಯಲ್ಲಿ ಉಗ್ರರು ನಡೆಸಿದ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸ್ಫೋಟದಲ್ಲಿ ನಾಲ್ಕು ಮಂದಿ ಪೊಲೀಸರು ಮೃತಪಟ್ಟರೆ, ಉಳಿದಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಸೊಪೊರೆಯ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್ ಈ ಸ್ಫೋಟಕ್ಕೆ ಹೊಣೆ ಹೊತ್ತುಕೊಂಡಿದೆ.
ಬಾರಾಮುಲ್ಲಾ ಜಿಲ್ಲೆಯ ಸೊಪೊರೆಯ ಛೋಟಾ ಬಜಾರ್ ಮತ್ತು ಬಡಾ ಬಜಾರ್ ಮಧ್ಯೆ ಈ ಐಇಡಿಯನ್ನು ಉಗ್ರರು ಅಳವಡಿಸಿದ್ದರು. ಪೊಲೀಸ್ ವಾಹನ ಈ ಪ್ರದೇಶದಲ್ಲಿ ಸಾಗುವಾಗ ಸ್ಫೋಟ ನಡೆಸಿದ್ದಾರೆ.
ಸ್ಫೋಟದಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.