ಅಫ್ಘಾನಿಸ್ಥಾನ : ತಾಲಿಬಾನ್ ಆಕ್ರಮಿತ ಅಫ್ಘಾನಿಸ್ಥಾನದಲ್ಲಿ ಲಕ್ಷಾಂತರ ಸಾವುಗಳನ್ನು ತಪ್ಪಿಸಲು ನಾವು ತಾಲಿಬಾನ್ ಸಂಘಟನೆಯೊಂದಿಗೆ ಮಾತುಕತೆ ನಡೆಸಬೇಕಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ತಾಲಿಬಾನಿಗಳೊಂದಿಗೆ ನಾವು ಮಾತುಕತೆ ನಡೆಸಬೇಕಿದೆ.ಆಗ ನಾವಯ ನಮ್ಮ ತತ್ವಗಳನ್ನು ನೇರವಾಗಿ ಹೇಳುವುದರೊಟ್ಟಿಗೆ ಅಫ್ಘಾನ್ ಜನರೊಂದಿಗೆ ನಾವಿದ್ದೇವೆ ಎಂಬುದನ್ನೂ ಖಚಿತಪಡಿಸಬೇಕು ಎಂದರು.
ಅಫ್ಘಾನ್ ನಲ್ಲಿ ಲಕ್ಷಾಂತರ ಜನರು ಹಸಿವಿನಿಂದ ಸಾಯುವ ಪರಿಸ್ಥಿತಿ ಎದುರಾಗಿದೆ. ಸಂಕಷ್ಟದಲ್ಲಿರುವವರ ಜೊತೆ ನಿಲ್ಲುವುದು ನಮ್ಮ ಕರ್ತವ್ಯ. ಈ ಮಾತುಕತೆಯ ಬಳಿಕ ಯಾವೆಲ್ಲಾ ಪರಿಣಾಮ ಬೀರುತ್ತದೆ ಎಂದು ತಿಳಿದಿಲ್ಲ. ಆದರೆ ಅಫ್ಘಾನ್ ಭಯೋತ್ಪಾದನೆಯ ಕೇಂದ್ರವಾಗಬಾರದು. ಮಹಿಳೆಯರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳಬಾದರು ಈ ನಿಟ್ಟಿನಲ್ಲಿ ನಾವು ತಾಲಿಬಾನ್ ಜೊತೆ ಮಾತುಕತೆ ನಡೆಸಬೇಕಿದೆ ಎಂದರು.
ಲಕ್ಷಾಂತರ ಸಾವುಗಳನ್ನು ತಪ್ಪಿಸಲು ತಾಲಿಬಾನ್ ಸಂಘಟನೆಯೊಂದಿಗೆ ಮಾತುಕತೆ ನಡೆಸಬೇಕಿದೆ : ಅಂಟೊನಿಯೊ ಗುಟೆರಸ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.